ಬೆಂಗಳೂರು: ಕೋರಮಂಗಳ-ಚಲ್ಲಘಟ್ಟ(ಕೆಸಿ ವ್ಯಾಲಿ) ಯೋಜನೆ ನೀರನ್ನು ಕೋಲಾರ ಜಿಲ್ಲೆಯ ಹೊಸೂರು ಗ್ರಾಮದ ಲಕ್ಷ್ಮೀಸಾಗರ ಕೆರೆಗೆ ಸರಬರಾಜು ಮಾಡುತ್ತಿದ್ದು, ಈ ನೀರು ಕಪ್ಪಾಗಿ ನೊರೆ ಕಂಡುಬರುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಕೆಸಿ ವ್ಯಾಲಿ ಮೂಲಕವಾಇ ಈ ನೀರನ್ನು ಲಕ್ಷ್ಮೀ ಸಾಗರಕ್ಕೆ ಬಿಡುಗಡೆ ಮಾಡಲಾಗುತ್ತಿದೆ. ಸೋಮವಾರ ರಾತ್ರಿ ಬಳಿಕ ಕಪ್ಪು ನೀರು ಬರುತ್ತಿದೆ ಮತ್ತು ಕೆರೆಯಲ್ಲಿ ನೊರೆ ಕಾಣಿಸಿಕೊಂಡಿದೆ ಎಂದು ಗ್ರಾಮಸ್ಥರು ಹೇಳಿದ್ದಾರೆ.
ರಾಸಾಯನಿಕಯುಕ್ತ ನೀರನ್ನು ಕೆರೆಗೆ ಬಿಡಲಾಗುತ್ತಿದೆ. ಇದರಿಂದಾಗಿ ಭಾರೀ ಮಟ್ಟದ ಅನಾಹುತ ಸಂಭವಿಸಬಹುದು ಎಂದು ಜನರು ಭೀತಿ ವ್ಯಕ್ತಪಡಿಸಿರುವರು.