News Kannada
Wednesday, October 05 2022

ಬೆಂಗಳೂರು ನಗರ

ಹೊರವರ್ತುಲ ರಸ್ತೆ ಪ್ರಯಾಣಿಕರಿಗೆ ವಾಯುಮಾಲಿನ್ಯದ ಆಪತ್ತು - 1 min read

Photo Credit :

ಹೊರವರ್ತುಲ ರಸ್ತೆ ಪ್ರಯಾಣಿಕರಿಗೆ ವಾಯುಮಾಲಿನ್ಯದ ಆಪತ್ತು

ವರದಿ: ಕಪಿಲ್ ಕಾಜಲ್

ಬೆಂಗಳೂರು:  ನಗರದ ಟ್ರಾಫಿಕ್ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಹೊರವರ್ತುಲ ರಸ್ತೆ (ಔಟರ್ ರಿಂಗ್ ರೋಡ್ – ಒ.ಆರ್.ಆರ್.) ನಿರ್ಮಿಸಲಾಗಿದ್ದರೂ, ನಗರದೊಳಗೆ ನಿರಂತರವಾಗಿ ವಾಹನಗಳ ಒಳಹರಿವು ಹೆಚ್ಚತೊಡಗಿ ಈ ರಸ್ತೆಯನ್ನೂ ಅತ್ಯಂತ ದಟ್ಟಣೆಯ ಹಾಗೂ ಕಲುಷಿತಗೊಳ್ಳುವಂತೆ ಮಾಡಿದೆ. 60 ಕಿಲೋಮೀಟರ್ ಉದ್ದದ ಈ ಹೊರವರ್ತುಲ ರಸ್ತೆಯು ನಗರದ ಪ್ರಮುಖ ಹೆದ್ದಾರಿಗಳನ್ನು ಸಂಪರ್ಕಿಸುತ್ತದೆ.

ನಗರದ ಐಟಿ ಹಬ್ ಎನಿಸಿರುವ ಸಿಲ್ಕ್ ರೋಡ್, ಕೆ.ಆರ್. ಪುರಂ ಮತ್ತು ಎಲೆಕ್ಟ್ರಾನಿಕ್ ಸಿಟಿಯನ್ನು ಒಆರ್‍ಆರ್‍ ನ ಒಂದು ಭಾಗವು ಸಂಪರ್ಕಿಸುತ್ತದೆ. ಈ ಪ್ರದೇಶದಲ್ಲಿ 15 ಲಕ್ಷಕ್ಕೂ ಅಧಿಕ ಜನರು ಉದ್ಯೋಗ ನಿರ್ವಹಿಸುತ್ತಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆಯ ವಿಜ್ಞಾನಿ ಡಾ. ಟಿ.ವಿ. ರಾಮಚಂದ್ರ ಅವರು ಹೇಳುವಂತೆ `ಈ ಪ್ರದೇಶದಲ್ಲಿ ಉದ್ಯೋಗದಲ್ಲಿರುವರು ನಗರದ ವಿವಿಧ ಪ್ರದೇಶಗಳಲ್ಲಿ ವಾಸಿಸುವವರಾಗಿದ್ದು, ಈ ಪ್ರದೇಶಕ್ಕೆ ನಿತ್ಯ ಬಂದು ಹೋಗುವುದಕ್ಕಾಗಿ ತಮ್ಮ ಖಾಸಗಿ ವಾಹನಗಳನ್ನೇ ಅತ್ಯಧಿಕ ಸಂಖ್ಯೆಯಲ್ಲಿ ಬಳಸುವವರಿದ್ದಾರೆ. ಇದು ವಾಯುಮಾಲಿನ್ಯವನ್ನು ತೀವ್ರಮಟ್ಟಕ್ಕೆ ಕೊಂಡೊಯ್ಯುತ್ತಿದೆ. ನಗರದ ವಾಯುಮಾಲಿನ್ಯದ 45% ಕ್ಕೆ ಕೇವಲ ವಾಹನಗಳ ಹೊರಸೂಸುವ ಹೊಗೆ ಕಾರಣವಾಗಿದ್ದು, ಇದರಲ್ಲಿ ಪಿಎಂ ಮಟ್ಟದ ಕಣಗಳು, ಕಾರ್ಬನ್ ಡೈಆಕ್ಸೈಡ್, ಸಾರಜನಕ ಆಕ್ಸೈಡ್‍ಗಳಿವೆ.

ಇದರ ಜೊತೆಗೆ ಹೊರವರ್ತುಲ ರಸ್ತೆಯ ಪ್ರದೇಶಗಳಲ್ಲಿ ನಿರಂತರವಾಗಿ ನಡೆಯುವ ನಿರ್ಮಾಣ ಕಾಮಗಾರಿಗಳಿಂದಲೂ ಪಿಎಂ2.5 ಹಾಗೂ ಪಿಎಂ10 ಅಧಿಕಗೊಳ್ಳುತ್ತದೆ.

ಎನ್ವಿರಾನ್‍ಮೆಂಟಲ್ ಇಂಪಾಕ್ಟ್ ಅಸ್ಸೆಸ್‍ಮೆಂಟ್ ರಿಪೋರ್ಟ್ (ಇಎಐಆರ್) ವರದಿಯಲ್ಲಿ ಫೆರಿಫೆರಲ್ ರಿಂಗ್ ರೋಡ್ (ಪಿಆರ್‍ಆರ್) ಹಾಗೂ ಔಟರ್ ರಿಂಗ್ ರೋಡ್ (ಒಆರ್‍ಆರ್)ಗಳನ್ನು ಸಂಪರ್ಕಿಸುವ ರಸ್ತೆಗಳನ್ನೂ ಉಲ್ಲೇಖಿಸಲಾಗಿದೆ.

ಈ ಪ್ರದೇಶ ವ್ಯಾಪ್ತಿಯಲ್ಲಿ ಸ್ಥಾಪಿಸಲಾಗಿರುವ 10 ಮಾನಿಟರಿಂಗ್ ಕೇಂದ್ರಗಳಲ್ಲಿ ಪಿಎಂ10 ಸಾಂದ್ರತೆಯು 80.5 ರಿಂದ 89.0 μg/m3 (1μg=10 ಲಕ್ಷ ಗ್ರಾಂ) ಪಿಎಂ2.5 ಸಾಂದ್ರತೆಯು 40.4 ರಿಂದ 46.8 μg/m3 ಇರುವುದಾಗಿ ತೋರಿಸುತ್ತದೆ. ಇದು ವಿಶ್ವ ಆರೋಗ್ಯ ಸಂಸ್ಥೆ ಸೂಚಿಸಿರುವ ಪಿಎಂ10 ಸಾಂದ್ರತೆಯು 20 μg/m3 ಹಾಗೂ ಪಿಎಂ2.5 ಸಾಂದ್ರತೆಯು 10 µg/m3 ಇರಬೇಕಾಗಿತ್ತು. ಇದರ ಜೊತೆಗೆ ಈ ಪ್ರದೇಶದಲ್ಲಿ ಅತಿಹೆಚ್ಚು ಪ್ರಮಾಣದಲ್ಲಿ ನೈಟ್ರೋಜನ್ ಆಕ್ಸೈಡ್ ಹಾಗೂ ಸಲ್ಫರ್ ಡೈಆಕ್ಸೈಡ್ ವಾತಾವರಣದಲ್ಲಿ ಸೇರಿಕೊಂಡಿದೆ.

ಇಎಐಆರ್ ವರದಿಯ ಪ್ರಕಾರ ವಾಹನಗಳಿಂದ ಹೊರಸೂಸುವ ಅನಿಲಕಾರಕ ಹೊಗೆಯು ಸುತ್ತಲ ಪ್ರದೇಶದ ಗಾಳಿಯ ಗುಣಮಟ್ಟವನ್ನು ಹದಗೆಡಿಸುತ್ತದೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ರಸ್ತೆಯ ನಿರ್ಮಾಣಗಳ ಸಂದರ್ಭ ನಿರ್ಮಾಣಕ್ಕೆ ಸಂಬಂಧಿಸಿದ ಕಚ್ಚಾವಸ್ತುಗಳ ಸಾಗಣೆ, ಕ್ರಷರ್‍ ಗಳಲ್ಲಿನ ಉತ್ಪಾದನೆ, ನಿರ್ಮಾಣ ವಸ್ತುಗಳನ್ನು ಸಾಗಿಸುವ ವಾಹನಗಳ ಓಡಾಟಗಳ ಸಂದರ್ಭ ಉಂಟಾಗುವ ಹೆಚ್ಚಿನ ಪ್ರಮಾಣದಲ್ಲಿನ ಧೂಳು ಕಾಮಗಾರಿಯಲ್ಲಿ ಕಾರ್ಯನಿರತರಾಗಿರುವ ಕಾರ್ಮಿಕರನ್ನೂ ಸೇರಿದಂತೆ ಸುತ್ತಲಿನ ಪ್ರದೇಶಗಳ ಸಾರ್ವಜನಿಕರನ್ನೂ ಒಳಗೊಂಡಂತೆ ಬಾಧಿಸುತ್ತದೆ. ಆ ಪ್ರದೇಶದಲ್ಲಿನ ಸಸ್ಯಗಳ ಎಲೆಗಳೂ ಬೆಳವಣಿಗೆ ಕುಂಠಿತಗೊಂಡು ಸಸ್ಯಗಳ ಬೆಳೆಯುವ ವೇಗವೂ ಕಡಿಮೆಯಾಗಬಹುದೆಂದು ವರದಿ ತಿಳಿಸಿದೆ.

See also  ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸಹಾಯಹಸ್ತ: ಸಿಎಂ

‘ಸದಾ ಟ್ರಾಫಿಕ್‍ನಲ್ಲಿ ಸಿಲುಕಿಕೊಳ್ಳುವ ಜನರಿಗೆ ವಾಯುಮಾಲಿನ್ಯದಿಂದ ಬರಬಹುದಾದ ರೋಗಗಳು ಬರುವ ಸಾಧ್ಯತೆ ಅಧಿಕ’ ಎಂದು ಇಕಾಲಜಿಕಲ್ ಸೆಕ್ಯುರಿಟಿ ಆಫ್ ಇಂಡಿಯಾದ ಆಡಳಿತ ಮಂಡಳಿ ಸದಸ್ಯ ಡಾ. ಯಲ್ಲಪ್ಪ ರೆಡ್ಡಿ ಹೇಳುತ್ತಾರೆ. ಯೋಜಿತವಲ್ಲದ ಅಭಿವೃದ್ಧಿಗೆ ಭ್ರಷ್ಟ ಅಧಿಕಾರಿಗಳೇ ಮುಖ್ಯ ಕಾರಣ, ಇದು ವಾಯುಮಾಲಿನ್ಯದ ಮಟ್ಟವನ್ನು ಹದಗೆಡಿಸಿದೆ’ ಎನ್ನುತ್ತಾರವರು.

ಪಿಎಂ ಮಟ್ಟದ ಕಣಗಳನ್ನು (ಅತಿ ಸಣ್ಣ ಅಪಾಯಕಾರಿ ಧೂಳಿನ ಕಣಗಳು) ಉಸಿರಾಡುವುದರಿಂದ ಅವು ನೇರವಾಗಿ ದೇಹದೊಳಕ್ಕೆ ಸುಲಭವಾಗಿ ಪ್ರವೇಶಿಸುತ್ತದೆ. ಶ್ವಾಸಕೋಶದ ಆಳಕ್ಕೂ ಇಳಿಯುವ ಅವು ರಕ್ತ ವ್ಯವಸ್ಥೆಯೊಳಗೆ ಕೂಡಾ ಪ್ರವೇಶ ಪಡೆಯಬಹುದು. ಇಂತಹ ಕಣಗಳನ್ನು ದೀರ್ಘಕಾಲದವರೆಗೆ ಉಸಿರಾಡುವುದರಿಂದ ಹೃದಯ ಮತ್ತು ಉಸಿರಾಟದ ಕಾಯಿಲೆಗಳು ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುವ ಅಪಾಯವಿದೆ ಎಂದು ಡಬ್ಲ್ಯೂಹೆಚ್‍ಒ ತಿಳಿಸುತ್ತದೆ.

ರಿಂಗ್ ರೋಡ್ ಕುರಿತಾಗಿ ನಡೆದ ಅಧ್ಯಯನವೊಂದರ ಪ್ರಕಾರ ಹೊಗೆರಹಿತ ಸಾರಿಗೆಯ ಬಳಕೆಯು (ಇಕೋ-ಡ್ರೈವಿಂಗ್) ವಾಹನದ ಚಾಲಕನೂ ಸೇರಿದಂತೆ ಪರಿಸರಕ್ಕೂ ಹೆಚ್ಚಿನ ಪ್ರಯೋಜನವನ್ನು ನೀಡುತ್ತದೆ. ವಾಯುಮಾಲಿನ್ಯ, ಶಬ್ದಮಾಲಿನ್ಯ, ಅಪಘಾತಗಳ ಸಂಖ್ಯೆ, ಪ್ರಯಾಣದ ಅವಧಿ ಕಡಿಮೆಯಾಗಿ ರಸ್ತೆ ಸುರಕ್ಷತೆಯ ಅರಿವು ಹೆಚ್ಚುತ್ತದೆ. ಆ ಮೂಲಕ ವಾಯುಮಾಲಿನ್ಯವನ್ನು ಗಣನೀಯವಾಗಿ ತಗ್ಗಿಸಬಹುದು.

 (ಲೇಖಕರು ಬೆಂಗಳೂರು ಮೂಲದ ಹವ್ಯಾಸಿ ಬರಹಗಾರರು ಹಾಗೂ ಭಾರತೀಯ ವರದಿಗಾರರ ಸಂಪರ್ಕ ಜಾಲವಾಗಿರುವ 101Reporters.comನ ಸದಸ್ಯರು)

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು