ಬೆಂಗಳೂರು: ರಾಜ್ಯ ಸಚಿವ ಸಂಪುಟ ಸೇರ್ಪಡೆಗೆ ಎ.ಎಚ್. ವಿಶ್ವನಾಥ್ ಗೆ ಹೈಕೋರ್ಟ್ ತಡೆ ಹೇರಿದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಘಟಕವು ಸುಪ್ರೀಂಕೋರ್ಟ್ ಗೆ ಹೋಗಲು ನಿರ್ಧರಿಸಿದೆ.
ಬಿಜೆಪಿಯ ಸರ್ಕಾರ ರಚನೆಗೆ ನೆರವಾದ ಎಲ್ಲರಿಗೂ ರಾಜ್ಯ ಸರ್ಕಾರವು ನೆರವಾಗಲಿದೆ ಎಂದು ರಾಜ್ಯ ಉಪಮುಖ್ಯಮಂತ್ರಿ ರಮೇಶ್ ಜಾರಕಿಹೊಳಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ನಾವು ಸುಪ್ರೀಂಕೋರ್ಟ್ ಗೆ ತೆರಳುತ್ತೇವೆ ಎಂದು ಅಶೋಕ್ ಹೇಳಿದರು.
ಸರ್ಕಾರ ರಚನೆಗೆ ನೆರವಾದ ವಿಶ್ವನಾಥ್ ಅವರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.