ಬೆಂಗಳೂರು: ಕನ್ನಡಪರ ಕಾರ್ಯಕರ್ತರನ್ನು ಪೊಲೀಸರು ಬಂದಿಸಿದ್ದನ್ನು ವಿರೋಧಿಸಿದ ವಾಟಾಳ್ ನಾಗರಾಜ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೇಲೆ ವಾಗ್ದಾಳಿ ನಡೆಸಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಪರಭಾಷಾ ಏಜೆಂಟ್. ಕನ್ನಡಿಗರನ್ನು ತುಳಿದು ಬೇರೆಯವರಿಗೆ ಪಟ್ಟ ಕಟ್ಟುವ ಕೆಲಸ ನಡೆಯುತ್ತಿದೆ. ಯಡಿಯೂರಪ್ಪ ಮಾಡುತ್ತಿರುವ ಕೆಲಸಗಳಿಂದ ಬಿಜೆಪಿ ಹಾಗೂ ಆರ್ ಎಸ್ ಎಸ್ ಕನ್ನಡ ವಿರೋಧಿಯಾಗಿದೆ ಎಂದು ವಾಟಾಳ್ ನಾಗರಾಜ್ ಕಿಡಿಕಾರಿದರು.
ಪ್ರತಿಭಟಿಸುತ್ತ ಟೌನ್ ಹಾಲ್ನತ್ತ ಹೊರಟ ವಾಟಾಳ್ ನಾಗಾರಾಜ್ ಕಾರ್ಪೋರೇಷನ್ ಮುಂಭಾಗದ ರಸ್ತೆಯಲ್ಲಿ ಇತರೆ ಕನ್ನಡ ಪರ ಹೋರಾಟಗಾರರೊಂದಿಗೆ ಸಾಗಿದರು. ಈ ಮಧ್ಯೆ, ವಾಟಾಳ್ ನಾಗರಾಜ್ ಮತ್ತು ಪೊಲೀಸರ ಮಧ್ಯೆ ವಾಗ್ವಾದು ನಡೆಯಿತು ಹಾಗೂ ಅದೇ ಸಮಯದಲ್ಲಿ ವಾಟಾಳ್ ಮತ್ತು ಕೆಲವು ಕಾರ್ಯಕರ್ತರನ್ನು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡರು ಎನ್ನಲಾಗುತ್ತಿದೆ.