News Kannada
Tuesday, February 07 2023

ಬೆಂಗಳೂರು ನಗರ

ಟ್ರಕ್ ಟರ್ಮಿನಲ್ಸ್ ನ್ನು ಮಾದರಿ ನಿಗಮ ಮಾಡಲು ಪಣ: ಡಿ.ಎಸ್.ವೀರಯ್ಯ

Photo Credit :

ಟ್ರಕ್ ಟರ್ಮಿನಲ್ಸ್ ನ್ನು ಮಾದರಿ ನಿಗಮ ಮಾಡಲು ಪಣ: ಡಿ.ಎಸ್.ವೀರಯ್ಯ

ಬೆಂಗಳೂರು: ಡಿ. ದೇವರಾಜ ಅರಸ್ ಟ್ರಕ್ ಟರ್ಮಿನಲ್ಸ್ ನಿಗಮವನ್ನು ಮಾದರಿ ನಿಗಮವನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಉತ್ತಮ ಕಾರ್ಯ ನಿರ್ವಹಿಸಲಾಗುತ್ತಿದ್ದು, ಬೆಂಗಳೂರಿನ ಯಶವಂತಪುರದಲ್ಲಿರುವ ಟ್ರಕ್ ಟರ್ಮಿನಲ್ಸ್ ಜಾಗದಲ್ಲಿ ಬೃಹತ್ ಭವನವನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ನಿಗಮ ನೂತನ ಅಧ್ಯಕ್ಷರಾದ ಡಿ.ಎಸ್ ವೀರಯ್ಯ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜ್ಯದ ವಿವಿಧೆಡೆ ಟ್ರಕ್ ಟರ್ಮಿನಲ್ಸ್‍ಗಳನ್ನು ನಿರ್ಮಿಸುವ ಉದ್ದೇಶ ಹೊಂದಲಾಗಿದ್ದು ದಾವಣಗೆರೆ, ಹರಿಹರ, ವಿಜಯಪುರ, ಮಂಗಳೂರು, ಶಿವಮೊಗ್ಗ ಹಿರಿಯೂರು, ಬೀದರ್, ಕಲಬುರ್ಗಿ, ಚಿತ್ರದುರ್ಗ ಸೇರಿದಂತೆ ಇತರೆ ನಗರಗಳಲ್ಲಿ ಟ್ರಕ್ ಟರ್ಮಿನಲ್ಸ್ ಗಳನ್ನು ನಿರ್ಮಿಸಲಾಗುವುದು ಇದಕ್ಕಾಗಿ ಜಮೀನುಗಳನ್ನು ಗುರುತಿಸುವಂತೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು.

ಹಾಲಿ ಇರುವ ಟ್ರಕ್ ಟರ್ಮಿನಲ್ಸ್ ಗಳಲ್ಲಿ ಮೂಲ ಭೂತ ಸೌಕರ್ಯದ ಕೊರತೆ ಇದೆ.  ಪೊಲೀಸ್ ಠಾಣೆ, ಶೌಚಾಲಯ, ವ್ಯಾಯಾಮ ಕೇಂದ್ರ, ಸುಸಜ್ಜಿತ ವಸತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು. ರಾಜ್ಯ ಸರ್ಕಾರ ಮತ್ತು ಲಾರಿ ಮಾಲೀಕರ ಸಂಘದ ವಿಶ್ವಾಸ ಪಡೆದು ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಬೆಂಗಳೂರಿನ ಯಶವಂತಪುರದ ಕೈಗಾರಿಕಾ ಉಪನಗರ 2ನೇ ಹಂತದಲ್ಲಿ 39 ಎಕರೆ ಪ್ರದೇಶದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಿದ್ದು ಇದು 1995 ರಿಂದ ಬಳಕೆಯಲ್ಲಿದೆ ಪ್ರತಿನಿತ್ಯ 1500 ರಿಂದ 2000 ಟ್ರಕ್ ಮಾಲೀಕರು, ಏಜೆಂಟರುಗಳು ಇದರ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಮೈಸೂರು ನಂಜನಗೂಡು-ರಿಂಗ್ ರಸ್ತೆಯ ಮತ್ತು ವರ್ತುಲ ರಸ್ತೆಯ ಕೂಡು ಸ್ಥಳದಲ್ಲಿ 16.20 ಎಕರೆ ಜಮೀನಿನಲ್ಲಿ ಮೊದಲನೇ ಹಂತದಲ್ಲಿ 15.06 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಿ, ಈ ಟ್ರಕ್ ಟರ್ಮಿನಲ್‍ನಲ್ಲಿ 96 ಟ್ರಕ್, ಲಾರಿ ನಿಲುಗಡೆಗೆ ಮತ್ತು ಇತರ ಮೂಲ ಸೌಲಭ್ಯಗಳ ವ್ಯವಸ್ಥೆ ಕಲ್ಪಿಸಲಾಗಿದೆ ಧಾರವಾಡ ನಗರದ ಬೇಲೂರು ಕೈಗಾರಿಕಾ ಪ್ರದೇಶದಲ್ಲಿ 7.26 ಎಕರೆ ಜಮೀನಿನಲ್ಲಿ 7.71 ಕೋಟಿ ರೂ.ಗಳ ವೆಚ್ಚದಲ್ಲಿ ಟ್ರಕ್ ಟರ್ಮಿನಲ್ ಅನ್ನು ನಿರ್ಮಿಸಿ, ಟ್ರಕ್ ಟರ್ಮಿನಲ್ ನಲ್ಲಿ 183 ಟ್ರಕ್, ಲಾರಿ ನಿಲುಗಡೆ ಮತ್ತು ಇತರೆ ಮೂಲಸೌಲಭ್ಯಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಲು ಪುರಸಭೆಗೆ ಸೇರಿದ 3-00 ಎಕರೆ ಜಮೀನಿನನ್ನು ಖರೀದಿಸಿ ವಶಪಡಿಸಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು. 

See also  ಬೆಂಕಿ ಅವಘಡದಲ್ಲಿ ಮೃತರಾದ ಕುಟುಂಬಕ್ಕೆ 5ಲಕ್ಷ ಪರಿಹಾರ ಘೋಷಣೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು