ಬೆಂಗಳೂರು: ಎರಡನೇ ಬಾರಿ ಸಿಲಿಕಾನ್ ಸಿಟಿ ಹೊರವಲಯದ ಮಾಗಡಿ ರಸ್ತೆಯ ಟೋಲ್ ಬಳಿ ನಿರ್ಮಿಸಿದ್ದ ಸಾಹಸಸಿಂಹ ಡಾ.ವಿಷ್ಣುವರ್ಧನ್ ಪ್ರತಿಮೆಯನ್ನು ಕಿಡಿಗೇಡಿಗಳು ಧ್ವಂಸ ಮಾಡಿರುವ ಘಟನೆ ಮಾಗಡಿ ರಸ್ತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಈ ಹಿಂದೆಯೂ ಒಮ್ಮೆ ಇದೇ ಸ್ಥಳದಲ್ಲಿ ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ನಾಶ ಮಾಡಲು ಯತ್ನಿಸಿದ್ದರು.
ತಡರಾತ್ರಿ ವಿಷ್ಣುವರ್ಧನ್ರ 12 ಅಡಿ ಪ್ರತಿಮೆಯನ್ನು ಧ್ವಂಸ ಮಾಡಿ ಅವಮಾನ ಮಾಡಿರುವ ಕಿಡಿಗೇಡಿಗಳು ಮತ್ತೆ ತಮ್ಮ ವಿಕೃತಿ ಕೆಲಸಗಳನ್ನು ತೋರ್ಪಡಿಸಿದ್ದಾರೆ.
ಟೋಲ್ಗೇಟ್ ಬಳಿ ಪ್ರತಿಮೆ ನಿರ್ಮಾಣ ಮಾಡುವ ವಿಚಾರವಾಗಿ ಎರಡು ಗುಂಪುಗಳ ನಡುವೆ ಆಗಾಗ ಘರ್ಷಣೆ ನಡೆಯುತ್ತಿತ್ತು ಎನ್ನಲಾಗಿದ್ದು, ಆ ಸಮಯದಲ್ಲಿ ಪ್ರತಿಮೆಯನ್ನು ಒಂದು ವಾರದಲ್ಲಿ ಧ್ವಂಸ ಮಾಡುತ್ತೇವೆ ಎಂದು ಕೆಲವೊಬ್ಬರು ಹೇಳಿದ್ದರು ಎಂದು ತಿಳಿಸಲಾಗಿದೆ. ಆದ್ದರಿಂದ ಆ ಕಿಡಿಗೇಡಿಗಳು ಈ ರೀತಿಯ ಕೃತ್ಯವನ್ನು ನಡೆಸಿದ್ದಾರೆ ಎಂದು ವಿಷ್ಣು ಅಭಿಮಾನಿಗಳು ಶಂಕಿಸಿದ್ದಾರೆ. ಈ ಬಗ್ಗೆ ಪೊಲಿಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.