ಬೆಂಗಳೂರು: ಸಿನಿಪ್ರಿಯರು ಪ್ರತಿವರ್ಷ ಆರಂಭವಾಗುವಾಗ ಯಾವ ಚಿತ್ರ ಬಿಡುಗಡೆಯಾಗುತ್ತದೆ ಎಂದು ಕುತೂಹಲದಿಂದ ಕಾಯುತ್ತಾರೆ. ಅಂತಹ ಕುತೂಹಲಕ್ಕೆ ಇದೀಗ ತೆರೆಬಿದ್ದಿದೆ. 2021ರ ಜನವರಿ 1ರಂದು ರಾಘವೇಂದ್ರ ರಾಜಕುಮಾರ್ ಅಭಿನಯದ ರಾಜತಂತ್ರ ಚಿತ್ರವು ಬಿಡುಗಡೆಯಾಗಲಿದೆ.
ಛಾಯಾಗ್ರಾಹಕ ಪಿವಿಆರ್ ಸ್ವಾಮಿ ಚಿತ್ರವನ್ನು ನಿರ್ದೇಶಿಸುತ್ತಿದ್ದು, ರಾಘವೇಂದ್ರ ರಾಜಕುಮಾರ್ ಅವರ ಅಭಿನಯದಲ್ಲಿ ಮೂಡಿ ಬಂದಿರುವ ಈ ಚಿತ್ರದ ಚಿತ್ರೀಕರಣ ಮುಗಿದಿದ್ದು, ಅದರ ಟ್ರೈಲರ್ ಹಾಗೂ ಹಾಡುಗಳನ್ನು ಪುನೀತ್ ರಾಜಕುಮಾರ್ ಬಿಡುಗಡೆ ಮಾಡಿದ್ದರು. ಇದೀಗ ಈ ಚಿತ್ರ ಹೊಸ ವರ್ಷದ ಮೊದಲ ಚಿತ್ರವಾಗಿ ಹೊರಬರಲಿದೆ.