ಬೆಂಗಳೂರು: ನಿನ್ನೆ ಸಾಹಸಸಿಂಹ ವಿಷ್ಣುವರ್ಧನ್ ಪ್ರತಿಮೆಯನ್ನು ಕದ್ದೊಯ್ಯಲಾಗಿತ್ತು ಎಂಬ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ಈ ಸಂಬಂಧ ಮಾತನಾಡಿರುವ ನಟ ಸುದೀಪ್ ಕೃತ್ಯವನ್ನೆಸಗಿದ್ದವರಿಗೆ ವಾರ್ನಿಂಗ್ ನೀಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಹೌದು, ಈ ಬಗ್ಗೆ ಟ್ವೀಟ್ ಮಾಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಈ ಕೃತ್ಯ ಎಸಗುವ ಮುನ್ನ ಯೋಚಿಸಬೇಕಿತ್ತು. ಇಂತಹ ಕೃತ್ಯ ಮಾಡಲು ಮನಸ್ಸಾದರೂ ಹೇಗೆ ಬರುತ್ತದೆ. ಇನ್ನು ನೀವೇ ನಿಮ್ಮ ಹೆಸರು ಹೊರಬರದಂತೆ ನೋಡಿಕೊಳ್ಳಿ. ಗೊತ್ತಾದದ್ದೇ ಆದರೆ ಅಂತಹ ದಿನ ಮೊದಲು ದೇಶ ಬಿಟ್ಟು ಹೋಗಿಬಿಡಿ. ಇಲ್ಲವಾದಲ್ಲಿ ನಿಮ್ಮ ಗತಿ ಏನಾಗಬಹುದು ಎಂದು ಯಾರಿಗೂ ಊಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಕೆ ನೀಡಿದರು.
ಇಂತಹ ಕೃತ್ಯ ಎಸಗಲು ಕಾರಣವೇನೆಂದು ತಿಳಿಯುತ್ತಿಲ್ಲ. ಆದರೆ ಅವರು ಕೆಡವಿದ ಪ್ರತಿಭೆಗಿಂತ ಒಂದು ಕೈ ರುವಂತಹ ಪ್ರತಿಮೆಯನ್ನು ಪುನಹ ನಿರ್ಮಿಸುತ್ತೇವೆ. ಆದರೆ ಕೃತ್ಯ ಎಸಗಿದವರನ್ನು ಮಾತ್ರ ಸುಮ್ಮನೆ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.