ಬೆಂಗಳೂರು: ಸಾರ್ವಜನಿಕರಿಗೆ ಸುಗಮ ಆಹವಾಲು ( ದೂರು) ಸಲ್ಲಿಕೆಗೆ ಅನಗತ್ಯ ಗೊಂದಲವನ್ನು ತಪ್ಪಿಸಲು ಮತ್ತು ಅಹವಾಲು ಸಲ್ಲಿಕೆ ಹಾಗೂ ನಿರ್ವಹಣೆಯನ್ನು ಸರಳೀಕರಿಸುವ ಉದ್ದೇಶದಿಂದ ಇಮೇಲ್ ಮೂಲಕ ಕಳಿಸುವ ಅಥವಾ ಸ್ವೀಕರಿಸುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಯೋಜನೆ 2021ರ ಜನವರಿ 01ರಿಂದ, ಜಾರಿಯಾಗುವಂತೆ ಹಾಗೂ cm.kar@nic.in ವಿಳಾಸವೊಂದೇ ಅಧಿಕೃತ ಇ – ಮೇಲ್ ವಿಳಾಸವನ್ನಾಗಿ ನಿಗದಿಪಡಿಸಲಾಗಿದೆ.
ಪ್ರಸ್ತುತ ಮುಖ್ಯಮಂತ್ರಿಗಳ ಸಚಿವಾಲಯವು ಮೂರು ಸಕ್ರಿಯ ಇ – ಮೇಲ್ ವಿಳಾಸಗಳನ್ನು ಹೊಂದಿದ್ದು , ಸಾರ್ವಜನಿಕರಿಂದ ಸಚಿವಾಲಯಕ್ಕೆ ಇ – ಮೇಲ್ ಮೂಲಕ ಸ್ವೀಕೃತವಾಗುವ ಅಹವಾಲುಗಳನ್ನು ಇ – ಆಫೀಸ್ ಮೂಲಕ ನಿರ್ವಹಿಸಲಾಗುತ್ತಿದೆ.