ಬೆಂಗಳೂರು: ಪೇಜಾವರ ಮಠದ ಮಠಾಧೀಶರಾಗಿರುವ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಗಳಿಗೆ ವೈ ದರ್ಜೆಯ ಸುರಕ್ಷತೆ ನೀಡಲಾಗಿದೆ.
ಪ್ರಯಾಣದ ವೇಳೆ ಅವರಿಗೆ ಪೊಲೀಸ್ ಬೆಂಗಾವಲಿನ ಜತೆಗೆ ದಿನದ 24 ಗಂಟೆಗಳ ಕಾಲವೂ ಶಸ್ತ್ರಸಜ್ಜಿತ ಪೊಲೀಸ್ ಕಾವಲು ಒದಗಿಸಲಾಗುವುದು.
ಅಯೋಧ್ಯೆಯಲ್ಲಿ ರಾಮ ಮಂದಿನ ನಿರ್ಮಾಣ ಕಾರ್ಯವು ಆರಂಭವಾಗಿದ್ದು, ಇದರ ಸಮಿತಿಯ ಸದಸ್ಯರಾಗಿರುವ ಶ್ರೀಗಳಿಗೆ ವೈ ಮಾದರಿ ಸುರಕ್ಷತೆ ನೀಡಲು ರಾಜ್ಯ ಸರ್ಕಾರವು ನಿರ್ಧರಿಸಿದೆ.
ರಾಮಮಂದಿರ ನಿರ್ಮಾಣಕ್ಕಾಗಿ ಧನ ಸಂಗ್ರಹ ಮಾಡಲು ಶ್ರೀಗಳು ಈಗ ದೇಶ ಸಂಚಾರದಲ್ಲಿ ತೊಡಗಿರುವರು.