ಬೆಂಗಳೂರು: ಥರ್ಡ್ ಪಾರ್ಟಿ ವಿಮೆಯಿಂದ ಅಪಘಾತಕ್ಕೀಡಾದವರಿಗೆ ಪರಿಹಾರ ನೀಡಲಾಗುವುದು ಎಂದು ಹೈಕೋರ್ಟ್ ಏಕಸದಸ್ಯ ಪೀಠದಿಂದ ಮಹತ್ವದ ಆದೇಶ ನೀಡಿದೆ.
ಅಪಘಾತ ಮಾಡಿದ ವಾಹನದ ಹಿಂಬದಿ ಸವಾರ ಮತ್ತು ಸಹ ಪ್ರಯಾಣಿಕರಿಗೆ ಥರ್ಡ್ ಪಾರ್ಟಿ ವಿಮೆ ಪರಿಹಾರ ಸಿಗುವುದಿಲ್ಲ. ಪ್ರತ್ಯೇಕ ವಿಮೆ ಮೊತ್ತ ಭರಿಸಿದಾಗ ಮಾತ್ರ ಹಿಂಬದಿ ಸವಾರನಿಗೂ ಪರಿಹಾರ ಅನ್ವಯವಾಗುತ್ತೆ. ಇದರ ಹೊರತಾಗಿ ವಿಮೆ ಕಂಪನಿಗಳು ಪರಿಹಾರ ನೀಡಬೇಕಿಲ್ಲ ಎಂದು ಹೈಕೋರ್ಟ್ ತೀರ್ಪಿನಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದೆ.
ನ್ಯಾ. ಹಂಚಟೆ ಸಂಜೀವ್ ಕುಮಾರ್ ಅವರಿದ್ದ ಪೀಠ ಈ ತೀರ್ಪನ್ನು ನೀಡಿದ್ದು, ಕಾನೂನಿನಡಿ ಥರ್ಡ್ ಪಾರ್ಟಿ ವಿಮೆ ಕಡ್ಡಾಯವಾಗಿದ್ದು, ಖಾಸಗಿ ವಾಹನದ ಚಾಲಕ, ಸಹ ಪ್ರಯಾಣಿಕರ ವಿಮೆ ಐಚ್ಛಿಕ. ಹಾಗೆಯೇ ಅಪಘಾತದಲ್ಲಿ ಮೃತಪಟ್ಟರೆ ವಾಹನದ ಮಾಲೀಕನೇ ಹೊಣೆ ಎಂದು ಥರ್ಡ್ ಪಾರ್ಟಿ ವಿಮೆ ಬಗ್ಗೆ ಸ್ಪಷ್ಟವಾಗಿ ತೀರ್ಪಿನಲ್ಲಿ ತಿಳಿಸಿದ್ದಾರೆ.