ಬೆಂಗಳೂರು: ಕರ್ನಾಟಕ ಅನಿವಾಸಿ ಭಾರತೀಯ ಸಮಿತಿ- ಯುಎಇ ಅಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಕರ್ನಾಟಕ ಸಿಎಂ ಬಿಎಸ್ ಯಡಿಯೂರಪ್ಪ ಅವರನ್ನುದ್ದೇಶಿಸಿ ಪತ್ರ ಬರೆದಿದ್ದು, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಕುಂದುಕೊರತೆಗಳ ಬಗ್ಗೆ ಹೇಳಿಕೊಂಡಿದ್ದು ಅದನ್ನು ಸರಿಪಡಿಸುವಂತೆ ಕೇಳಿದ್ದಾರೆ.
ಪ್ರವೀಣ್ ಶೆಟ್ಟಿ ಅವರು ಬರೆದ ಪತ್ರದಲ್ಲಿ, ” 2008ರಿಂದ 11 ರ ತಮ್ಮ ಆಡಳಿತಾವಧಿಯಲ್ಲಿ ಪ್ರಥಮಬಾರಿಗೆ ಅನಿವಾಸಿಗರ ಕ್ಷೇಮಕ್ಕಾಗಿ ಒಂದು ಸೆಲ್ ಪ್ರಾರಂಭ ಮಾಡಿರುವುದು ನಿಜವಾಗಿಯೂ ಅಭಿನಂದನಾರ್ಹ. ತದನಂತರ ಬಂದ ಸರ್ಕಾರ ಯಾವುದೇ ಚಟುವಟಿಕೆಗಳನ್ನು ಮುಂದುವರಿಸಿದೆ ಅನಿವಾಸಿ ಗಳನ್ನು ಕಡೆಗಣಿಸಿದೆ” ಎಂದು ಹೇಳಿದ್ದಾರೆ.
ಮುಂದುವರೆಸಿ, “ಅನಿವಾಸಿ ಕನ್ನಡಿಗರ ಪರವಾಗಿ ತಮ್ಮಲ್ಲಿ ವಿನಮ್ರತೆಯಿಂದ ಬೇಡಿಕೊಳ್ಳುತ್ತಿರುವ ದೆಂದರೆ ಅನಿವಾಸಿಗರ ಕ್ಷೇಮಾಭಿವೃದ್ಧಿಗಾಗಿ ತಮ್ಮಿಂದಲೇ ಸ್ಥಾಪಿಸಲ್ಪಟ್ಟ ಕರ್ನಾಟಕ ಅನಿವಾಸಿ ಭಾರತೀಯರ ಸಮಿತಿಗೆ ಉಸ್ತುವಾರಿಗಳನ್ನು ನೇಮಿಸಬೇಕು” ಎಂದು ಕೋರಿದ್ದಾರೆ.