ಬೆಂಗಳೂರು: ಆರೋಗ್ಯದಲ್ಲಿ ಉಂಟಾದ ವ್ಯತ್ಯಾಸದಿಂದಾಗಿ ಸಚಿವ ಡಿವಿ ಸದಾನಂದ ಗೌಡ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಶಿವಮೊಗ್ಗದಿಂದ ಬೆಂಗಳೂರಿಗೆ ಬರುವ ಸಂದರ್ಭದಲ್ಲಿ ದೇಹದಲ್ಲಿ ಶುಗರ್ ಲೆವೆಲ್ ಕಡಿಮೆಯಾದ ಕಾರಣ ಅಸ್ವಸ್ಥಗೊಂಡು ಚಿತ್ರದುರ್ಗದಲ್ಲಿ ಬಸವೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಅವರನ್ನು ಬೆಂಗಳೂರಿನ ಆಸ್ಟರ್ ಆಸ್ಪತ್ರೆಗೆ ವರ್ಗಾಂತರ ಗೊಳಿಸಲಾಗಿತ್ತು.
ಈಗ ಚೇತರಿಸಿಕೊಂಡ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.