ತುಮಕೂರು: ವಿದ್ಯಾರ್ಥಿಗಳಿಗೆ ಬಸ್ ನಿಲ್ಲಿಸದೇ ಹೋದ ಚಾಲಕನಿಗೆ ಸರಿಯಾಗಿ ತರಾಟೆ ತೆಗೆದುಕೊಂಡು ಸಚಿವ ಸುರೇಶ್ ಕುಮಾರ್.
ಕೊರಟಗೆರೆ-ಬೆಂಗಳೂರು ರಸ್ತೆಯ ಐ.ಕೆ.ಕಾಲೋನಿ ಬಳಿ ವಿದ್ಯಾರ್ಥಿಗಳು ನಿಂತಿದ್ದ ಸ್ಥಳದಲ್ಲಿಕೆ.ಎಸ್.ಆರ್.ಟಿ.ಸಿ ಬಸ್ ನಿಲ್ಲಿಸದೆ ಹೋದ ಚಾಲಕನಿಗೆ ಸಚಿವ ಸುರೇಶ್ ಕುಮಾರ್ ಚಳಿ ಬಿಡಿಸಿದ್ದು, ಸಚಿವರು ಕೆಲ ಕಾರ್ಯದ ನಿಮಿತ್ತ ಬೆಂಗಳೂರಿನಿಂದ ಮಧುಗಿರಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದೃಶ್ಯ ಕಣ್ಣಿಗೆ ಬಿದ್ದಿದೆ ಎಂದು ಹೇಳಲಾಗುತ್ತದೆ.
ಶಾಲಾ ವಿದ್ಯಾರ್ಥಿಗಳು ಕಾಯುತ್ತಿದ್ದರೂ ಬಸ್ ನಿಲ್ಲಿಸದೇ ಚಾಲಕ ತೆರಳಿದ್ದಾನೆ. ಇದನ್ನು ಗಮನಿಸಿದ ಸುರೇಶ್ ಕುಮಾರ್, ಬಸ್ ಅಡ್ಡಗಟ್ಟಿ ಚಾಲನಿಗೆ ಸರಿಯಾದ ಕ್ಲಾಸ್ ತೆಗೆದುಕೊಂಡು ಇನ್ನೊಮ್ಮೆ ಈ ರೀತಿಯ ಪ್ರವೃತ್ತಿಯನ್ನು ತೋರದಂತೆ ಎಚ್ಚರಿಕೆ ನೀಡುತ್ತಾರೆ ಎಂದು ವರದಿಗಳು ತಿಳಿಸಿವೆ.