ಬೆಂಗಳೂರು: ಮಾಜಿ ಸಚಿವ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರು ಪಕ್ಷದಿಂದ ಉಚ್ಛಾಟಿಸುವುದನ್ನು ಎದುರುನೋಡುತ್ತಿರುವರು ಎಂದು ಜೆಡಿಎಸ್ ನ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಮಧ್ಯಮದವರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ದೇವೇಗೌಡ ಅವರಿಗೆ ಪಕ್ಷದ ಬಗ್ಗೆ ನಿಷ್ಠೆಯಿಲ್ಲ ಎಂದು ಅವರು ಹೇಳಿದರು.
ಜಿಟಿಡಿಗೆ ಪಕ್ಷದಿಂದ ಉಚ್ಛಾಟನೆ ಮಾಡುವ ಬಗ್ಗೆ ಯಾವುದೇ ಭೀತಿಯಿಲ್ಲ. ಯಾಕೆಂದರೆ ಅವರ ಶಾಸಕ ಸ್ಥಾನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಇದರ ಬದಲು ಬೇರೆ ಪಕ್ಷದ ಜತೆಗೆ ಜೈಜೋಡಿಸಲು ಸಾಧ್ಯವಾಗುವುದು. ನಾವು ಅವರನ್ನು ಉಚ್ಛಾಟಿಸುವುದಾಗಿ ಎಲ್ಲಿಯೂ ಹೇಳಿಲ್ಲ. ಆದರೆ ಅವರು ಇದಕ್ಕಾಗಿ ಕಾಯುತ್ತಿರುವರು ಎಂದರು.