News Kannada
Friday, October 07 2022

ಬೆಂಗಳೂರು ನಗರ

ಉಮೇಶ್ ಕತ್ತಿ ಹೇಳಿಕೆ; ಅಣಕು ಶವಯಾತ್ರೆ ನಡೆಸಿದ ಕಾಂಗ್ರೆಸ್! - 1 min read

Photo Credit :

ಉಮೇಶ್ ಕತ್ತಿ   ಹೇಳಿಕೆ;  ಅಣಕು ಶವಯಾತ್ರೆ ನಡೆಸಿದ ಕಾಂಗ್ರೆಸ್!

ಬೆಂಗಳೂರು ; ರೈತರೊಬ್ಬರಿಗೆ ಸತ್ತೋಗು ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಪೇಚಿಗೆ ಸಿಲುಕಿರುವ ಬಿಜೆಪಿ ಸಚಿವ ಉಮೇಶ್ ಕತ್ತಿ ವಿರುದ್ಧ ಇಂದು ಕಾಂಗ್ರೆಸ್​ ಕಾರ್ಯಕರ್ತರು ಅಣಕು ಶವಯಾತ್ರ ನಡೆಸಿ ಆಕ್ರೋಶ ಹೊರಹಾಕಿದ್ದಾರೆ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಬಡವರಿಗೆ ಪಡಿತರ ಅಕ್ಕಿಯನ್ನು ಈ ಹಿಂದೆ ತಿಂಗಳಿಗೆ 5 ಕೆ.ಜಿ. ನೀಡಲಾಗುತ್ತಿತ್ತು. ಆದರೆ, ಬಿಜೆಪಿ ಸರ್ಕಾರ ಅದನ್ನು 3 ಕೆ.ಜಿ.ಗೆ ಇಳಿಸಿದೆ. ಇದರಿಂದಾಗಿ ಕೊರೋನಾ ಲಾಕ್​ಡೌನ್ ಸಂದರ್ಭದಲ್ಲಿ ರೈತರಿಗೆ ಸಾಕಷ್ಟು ಸಂಷಕ್ಟ ಎದುರಾಗಿದೆ. ಹೀಗಾಗಿಯೇ ರೈತರೊಬ್ಬರು ಸಚಿವ ಆಹಾರ ಸಚಿವ ಉಮೇಶ್ ಕತ್ತಿ ಅವರಿಗೆ ಕರೆ ಮಾಡಿ, “ಸಂಕಷ್ಟದ ಸಂದರ್ಭದಲ್ಲಿ ಅಕ್ಕಿಯ ಪ್ರಮಾಣವನ್ನು ಕಡಿತ ಮಾಡಲಾಗಿದೆ. ನಾವು ಸಾಯಬೇಕಾ ಬದುಕಬೇಕಾ?” ಎಂದು ಪ್ರಶ್ನಿಸಿದ್ದಾರೆ. ಆದರೆ, ಅದಕ್ಕೆ ದರ್ಪದಿಂದಲೇ ಉತ್ತರಿಸಿದ್ದ ಸಚಿವ ಉಮೇಶ್ ಕತ್ತಿ “ಸಾಯಿ” ಎಂದು ಹೇಳಿರುವುದು ಇದೀಗ ರಾಜ್ಯ ಮಟ್ಟದಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ಹೇಳಿಕೆ ಸಂಬಂಧ ಸಚಿವ ಉಮೇಶ್ ಕತ್ತಿ ಕ್ಷಮೆಯನ್ನೂ ಯಾಚಿಸಿದ್ದರು.
ಆದರೆ, ಇಷ್ಟಕ್ಕೆ ಸಮಾಧಾನವಾಗದ ಕಾಂಗ್ರೆಸ್​ ಕಾರ್ಯಕರ್ತರು ಸಚಿವ ಉಮೇಶ್ ಕತ್ತಿ ಅವರ ಶತಯಾತ್ರೆ ನಡೆಸಿ ರಾಜೀನಾಮೆಗೆ ಆಗ್ರಹಿಸಿದ್ದಾರೆ. ಕಾಂಗ್ರೆಸ್​ ಭವನದಲ್ಲಿ ಶವಯಾತ್ರೆ ನಡೆಸಿ ಶವಕ್ಕೆ ಬೆಂಕಿ ಹಚ್ಚಿದ್ದ ಕೈ ಕಾರ್ಯಕರ್ತರು, ಶವಯಾತ್ರೆಯನ್ನು ಸಿಎಂ ಗೃಹ ಕಚೇರಿ ಕೃಷ್ಣಾ ವರೆಗೆ ನಡೆಸಲು ಪೊಲೀಸರ ಬಳಿ ಅನುಮತಿ ಕೇಳಿದ್ದರು. ಆದರೆ, ಕೊರೋನಾ ಕಾರಣದಿಂದಾಗಿ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ ಕಾರಣ ಕಾಂಗ್ರೆಸ್ ಭವನದಲ್ಲೇ ಶವಯಾತ್ರೆಯ ಅಣಕು ಪ್ರದರ್ಶನ ಹಾಗೂ ಅಂತ್ಯ ಸಂಸ್ಕಾರ ನಡೆಸಲಾಗಿದೆ.
ಈ ವೇಳೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವ ರಾಮಲಿಂಗಾ ರೆಡ್ಡಿ, “ಉಮೇಶ್ ಕತ್ತಿಯವರ ಆಡಿಯೋ ಹೇಳಿಕೆಯನ್ನು ನಾನೂ ಕೇಳಿಸಿಕೊಂಡೆ. ಉಮೇಶ್ ಕತ್ತಿ ಕರೆ ಮಾಡಿದ ವ್ಯಕ್ತಿಗೆ ಸಾಯಿ ಅಂತ ಹೇಳಿದ್ದಾರೆ. ಇದನ್ನು ಖಂಡಿಸಿ ನಾವು ಇಂದು ಪ್ರತಿಭಟನೆ ನಡೆಸಿದ್ದೇವೆ. ಸಚಿವ ಉಮೇಶ್ ಕತ್ತಿ ಹೇಳಿಕೆ ಬಿಜೆಪಿಯ ಸಂಸ್ಕೃತಿಯನ್ನು ತೋರಿಸುತ್ತದೆ. ಸಚಿವರು ದಬ್ಬಾಳಿಕೆ, ನಿಷ್ಕಾಳಜಿ, ಉಡಾಫೆ ವರ್ತನೆ ತೋರಿಸುತ್ತಿದ್ದಾರೆ. ಜೆಪಿ ನಡ್ಡಾ, ನಳಿನ್ ಕುಮಾರ್ ಕಟೀಲ್ ಉಮೇಶ್ ಕತ್ತಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ಕೊಡಬೇಕು.ಜನ ಕೊರೋನಾ ಚಿಕಿತ್ಸೆ ಸೌಕರ್ಯ ಸಿಗದೆ ಸಾಯುತ್ತಿದ್ದಾರೆ. ಇಂಥ ದುಸ್ಥತಿಯಲ್ಲಿ ಇಡೀ ಸರ್ಕಾರ ತಲೆ ತಗ್ಗಿಸುವ ಹೇಳಿಕೆಯನ್ನು ಸಚಿವ ಉಮೇಶ್ ಕತ್ತಿ ಕೊಟ್ಟಿದ್ದಾರೆ. ಇದೇ ಕಾರಣಕ್ಕೆ ಸಚಿವ ಉಮೇಶ್ ಕತ್ತಿ ಅಣಕು ಶವಕ್ಕೆ ಬೆಂಕಿ ಇಟ್ಟು ಕಾಂಗ್ರೆಸ್ ಕಾರ್ಯಕರ್ತರ ಪ್ರತಿಭಟನೆ ನಡೆಸಿದ್ದಾರೆ” ಎಂದು ರಾಮಲಿಂಗಾ ರೆಡ್ಡಿ ತಿಳಿಸಿದ್ದಾರೆ.

See also  ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ್ ನಿಧನಕ್ಕೆ ಗಣ್ಯರ ಸಂತಾಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

145
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು