News Kannada
Saturday, December 03 2022

ಬೆಂಗಳೂರು ನಗರ

ರಾಜ್ಯದಲ್ಲಿ ಹೆಚ್ಚುತ್ತಿದೆ ಬ್ಲ್ಯಾಕ್ ಫಂಗಸ್ ಆತಂಕ; ಇವರಿಗೆ 97 ಮಂದಿಯಲ್ಲಿ ಸೋಂಕು ಪತ್ತೆ

Photo Credit :

ರಾಜ್ಯದಲ್ಲಿ ಹೆಚ್ಚುತ್ತಿದೆ  ಬ್ಲ್ಯಾಕ್ ಫಂಗಸ್  ಆತಂಕ; ಇವರಿಗೆ 97 ಮಂದಿಯಲ್ಲಿ ಸೋಂಕು ಪತ್ತೆ

 ಬೆಂಗಳೂರು : ರಾಜ್ಯದಲ್ಲಿ ಒಂದೆಡೆ ಕೋವಿಡ್ ಅಬ್ಬರ ಹೆಚ್ಚುತ್ತಿದ್ದರೆ ಇನ್ನೊಂದೆಡೆ ಬ್ಲ್ಯಾಕ ಫಂಗಸ್ ಸೋಂಕಿಗೆ ತುತ್ತಾಗುತ್ತಿರುವ ಅವರು ಹೆಚ್ಚಾಗಿದ್ದಾರೆ. ಈವರೆಗೆ 97 ಮಂದಿಯಲ್ಲಿ ಬ್ಲ್ಯಾಕ್ ಫಂಗಸ್ ‘ ಕಾಣಿಸಿಕೊಂಡಿದ್ದು , ನಾಲ್ವರು ಮೃತಪಟ್ಟಿದ್ದಾರೆ ಎಂದು ಆರೋಗ್ಯ ಸಚಿವ ಸುಧಾಕರ್ ತಿಳಿಸಿದ್ದಾರೆ . 

 

ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಪ್ರಕರಣ ಹೆಚ್ಚುತ್ತಿದ್ದು, ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ಚಿಕಿತ್ಸೆ ಪಡೆದುಕೊಳ್ಳುವಂತೆ ಸೂಚಿಸಿರುವ ಆರೋಗ್ಯ ಸಚಿವ ಡಾ.ಸುಧಾಕರ್ ಆಘಾತಕಾರಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.

 

ಬೆಂಗಳೂರು ಹೊರತುಪಡಿಸಿ ಮೈಸೂರು , ಶಿವಮೊಗ್ಗ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು , ಜಿಮ್ , ಕಿಮ್ಸ್ , ಕೆಎಂಸಿ ಹಾಗೂ ವೆನ್‌ಲಾಕ್ ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಚಿಕಿತ್ಸೆ ನೀಡಲು ಸೂಚಿಸಲಾಗಿದೆ .ಅದರೊಂದಿಗೆ ಈ ರೋಗ ಪತ್ತೆಯಾದರೆ ಸರ್ಕಾರದ ಗಮನಕ್ಕೆ ತರುವಂತೆ ಆದೇಶಿಸಲಾಗಿದೆ . ವೈದ್ಯರ ಸಲಹೆ ನೀಡದೆ ಇನ್ನು ಕೊರೋನಾ ಸೋಂಕಿತರಿಗೆ ಸ್ಟಿರಾಯ್ ನೀಡುವಂತಿಲ್ಲ .

 

 ಮಧುಮೇಹ ಇರುವ ಕೋರೋನಾ ಸೋಂಕಿತರು , ಕ್ಯಾನ್ಸರ್ ಇರುವವರು , ಅಂಗಾಂಗ ಕಸಿ ಮಾಡಿಸಿಕೊಂಡಿರುವವರಿಗೆ , ಎಚ್‌ಐವಿ ಸೋಂಕು ಇರುವವರಿಗೂ ಕಪ್ಪು ಶಿಲೀಂಧ್ರ ರೋಗ ಬರುವ ಸಾಧ್ಯತೆ ಹೆಚ್ಚು ಎಂದು ಮಾಹಿತಿ ನೀಡಿದ್ದಾರೆ .

 

 

See also  ಬೆಂಗಳೂರಿನ ಮೊದಲ ಮಹಿಳಾ ಕ್ಯಾಬ್ ಡ್ರೈವರ್ ಆತ್ಮಹತ್ಯೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

205

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು