ಬೆಂಗಳೂರು: ನಗರದಲ್ಲಿ ದಿನದಿಂದ ದಿನಕ್ಕೆ ಪೊಲೀಸ್ ಸಿಬ್ಬಂದಿಗಳು ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡ್ತೀರೋ ಘಟನೆಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ವ್ಯಾಪಕ ಟೀಕೆಗೆ ಗುರಿಯಾಗುತ್ತಿದ್ದಾರೆ.ಹೆಲ್ಮೇಟ್ ಇಲ್ಲದೇ ವಾಹನವನ್ನು ಚಲಾಯಿಸುವುದು ಸೇರಿದಂತೆ ಇತರೆ ಟ್ರಾಫಿಕ್ ರೂಲ್ಸ್‌ಗಳನ್ನು ಬ್ರೇಕ್ ಮಾಡಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಈ ನಡುವೆ ಫೇಸ್‌ಬುಕ್‌ನಲ್ಲಿ ಎನ್ನುವವರು ಲತಾ ವೆಂಕಟ್ ಎನ್ನುವವರು ಬೆಂಗಳೂರು ಪೋಲಿಸ್‌ನ ಮಹಿಳಾ ಪೇದೆಗಳು ತ್ರಿಬಲ್ ರೈಡಿಂಗ್ ಅನ್ನು ಹೆಲ್ಮೇಟ್ ಇಲ್ಲದೇ ಮಾಡ್ತ ಇರೋದನ್ನು ಹಾಗೂ ವಾಹನದ ಹಿಂಬದಿಯಲ್ಲಿ ಕುಳಿತಿರುವ ಮಹಿಳಾ ಪೋಲಿಸ್ ಸಿಬ್ಬಂದಿ ಹೆಲ್ಮೆಟ್ ಧರಿಸದೇ ಇರುವದ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. (ಸದ್ಯ ಈ ವಿಡಿಯೋವನ್ನು ಅವರು ಡಿಲೀಟ್ ಮಾಡಿದ್ದು, ಈ ವಿಡಿಯೋ ಇತರರ ಪ್ರೋಪೈಲ್‌ನಲ್ಲಿ ಅದು ವೈರಲ್ ಆಗುತ್ತಿದೆ)