ಬೆಂಗಳೂರು : ಇತ್ತೀಚಿಗಷ್ಟೇ ರಾಜ್ಯದ 15 ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ನಡೆಸಿತ್ತು. ಸಧ್ಯ ಈ ಅಧಿಕಾರಿಗಳ ವಿರುದ್ಧ ರಾಜ್ಯದ ವಿವಿಧ ಎಸಿಬಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ರಾಜ್ಯದ ವಿವಿಧ ಎಸಿಬಿ ಠಾಣೆಗಳಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಎಫ್ಐಆರ್ ದಾಖಲಿಸಲಾಗಿದೆ.
ಇನ್ನು ಅದ್ರಂತೆ, ಬೆಂಗಳೂರು ಅಧಿಕಾರಿಗಳ ಎಸಿಬಿ ತಂಡ ನಡೆಸಿದ ಬೆಂಗಳೂರು ಪ್ರಮುಖ ನಾಲ್ವರು ಅಧಿಕಾರಿಗಳ ಮೇಲೆ ನಗರ ಎಸಿಬಿ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಅದ್ರಂತೆ, ಬಿಬಿಎಂಪಿ ಎಫ್ಡಿಸಿ ಎಂ.ಮಾಯಣ್ಣ, ಬಿಬಿಎಂಪಿ ಗ್ರೂಪ್ ಡಿ ನೌಕರ ಜಿ.ವಿ ಗಿರಿ, ಸಕಾಲ ಆಡಳಿತಾಧಿಕಾರಿ ಎಲ್.ಸಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆ ಫಿಸಿಯೋಥೆರಪಿಸ್ಟ್ ಎಸ್.ಎನ್ ರಾಜಶೇಖರ್ ವಿರುದ್ಧ ಬೆಂಗಳೂರು ಎಸಿಬಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇನ್ನು ಮುಂದಿನ ಹಂತದಲ್ಲಿ ಈ ಅಧಿಕಾರಿಗಳ ವಿರುದ್ಧ ಪೊಲೀಸರು ತನಿಖೆ ನಡೆಸಲಿದ್ದಾರೆ.