ಬೆಂಗಳೂರು : ಆಗಾಗ್ಗೆ ಮಾರುಕಟ್ಟೆಯಲ್ಲಿರುವ ಔಷಧಿಗಳನ್ನು ಪರೀಕ್ಷೆಗೊಳಪಡಿಸಿ ಅವುಗಳಿಂದಾಗುವ ದುಷ್ಪರಿಣಾಮಗಳನ್ನು ಅರಿತು ಅವುಗಳನ್ನು ನಿಷೇಧ ಮಾಡುವುದು ನಡೆಯುತ್ತಲೇ ಇರುತ್ತದೆ.
ಇದೀಗ ಕೆಲವೊಂದು ಔಷಧಿಗಳನ್ನು ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಪರೀಕ್ಷೆ ನಡೆಸಿದ್ದು, ಈ ವೇಳೆ ಕೆಲವೊಂದು ಔಷಧಿಗಳು ಸೇವನೆಗೆ ಅರ್ಹವಲ್ಲ ಎಂಬುದನ್ನು ಹೊರಹಾಕಿದ್ದಾರೆ. ಹೀಗಾಗಿ ಹಲವು ಔಷಧಿಗಳನ್ನು ನಿಷೇಧಿಸಲಾಗಿದೆ.
ಹಾಗಾದರೆ ಯಾವುದು ಆ ಔಷಧಿಗಳು ಎಂಬುದನ್ನು ನೋಡಿದ್ದೇ ಆದರೆ ಅವುಗಳ ವಿವರ ಹೀಗಿದೆ.. ಲಿನ್ಸ್ ಜೆಲ್ (ಡೈಕ್ಲೋಫೆನಕ್ ಢೈಥೈಲಾಮೋನಿಯಂ, ಮಿಥೈಲ್ ಸ್ಯಾಲಿಸಿಲೇಟ್, ಮೆಂತ್ಯೋಲ್ & ಲಿನ್ಸೀಡ್ ಆಯಿಲ್ ಜೆಲ್, ಡಾಕ್ಸಿಮ್ -200 (ಸೆಫೋಡ್ಯಾಕ್ಸಿಮ್ ಡಿಸ್‍ಫಸಿಬಲ್ ಟ್ಯಾಬ್ಲೆಟ್ಸ್), ರಾಬ್‍ಜೋಲ್-20 (ರಾಬಪ್ರಜೋಲ್ ಸೋಡಿಯಂ ಟ್ಯಾಬ್ಲೆಟ್ಸ್ ಐ.ಪಿ), ಕ್ಯಾಲ್ಸಿರಿನ್- ಸಿಟಿ (ಸಾಫ್ಟ್‍ಜೆಲ್ ಕ್ಯಾಪ್ಸೂಲ್ಸ್ ಆಫ್ ಕ್ಯಾಲ್ಸಿಯಂ ವಿಥ್ ಕ್ಯಾಲ್ಸಿಟ್ರಿಯೋಲ್ & ಜಿಂಕ್, ಫಾಲಿಶೂರ್ (ಎಲ್- ಮಿಥೈಲ್ ಫೋಲೇಟ್, ಮಿಥೈಲ್‍ಕೋಬಾಲಮಿನ್ & ಪಿರಾಡಾಕ್ಸಲ್ -5- ಫಾಸ್ಪೇಟ್ ಕ್ಯಾಪ್ಸೂಲ್ಸ್), ಅಸೆಲೈಫ್ –ಎಸ್‍ಪಿ ಪೋರ್ಟ್ (ಅಸೆಕ್ಲೋಫೆನಕ್, ಪ್ಯಾರಸೆಟಮೋಲ್ & ಸೆರಾಟಿಯೋಫೆಪ್ಟಿಡೇಸ್ ಟ್ಯಾಬ್ಲೆಟ್ಸ್), ಕ್ಯಾಲ್ಸಿಯಂ ಕಾರ್ಬೋನೇಟ್ ವಿಥ್ ವಿಟಮಿನ್ ಡಿ3 ಟ್ಯಾಬ್ಲೆಟ್ಸ್ ಐಪಿ, ಅಸ್ಕೋರ್ಬಿಕ್ ಆಸಿಡ್ ಟ್ಯಾಬ್ಲೆಟ್ಸ್ ಐಪಿ 500ಎಂಜಿ (ವಿಟಮಿನ್ ಸಿ ಟ್ಯಾಬ್ಲೆಟ್ಸ್) ನಾಂಡ್ರೋಲೋನ್ ಡೆಕಾನೋಟ್ ಇನ್‍ಜೆಕ್ಷನ್ ಐ.ಪಿ 50 ಎಂಜಿ/ಎಂಎಲ್ (ಡೆಕಾ- ಡುರಾಬೋಲಿನ್ 50), ಕ್ಲೋಫಿಜೆನ್ –ಎಎಸ್ 150 ಟ್ಯಾಬ್ಲೆಟ್ಸ್ (ಕ್ಲೋಫಿಡೋಗ್ರೇಲ್ ಬೈಸಲ್ಪೇಟ್ & ಆಸ್ಪಿರಿನ್ ಟ್ಯಾಬ್ಲೆಟ್ಸ್), ಡೈಕ್ಲೋಫೆನಕ್ ಸೋಡಿಯಂ ಟ್ಯಾಬ್ಲೆಟ್ಸ್ ಐ.ಪಿ 50ಎಂಜಿ, ಮೆಟೊಫ್ರೊಲಾಲ್ ಸಕ್ಸಿನೆಟ್ (ಇಆರ್) ಅಂಡ್ ಅಮ್ಲೋಡಿಫೈನ್ ಬೆಸಿಲೇಟ್ ಟ್ಯಾಬ್ಲೆಟ್ಸ್ (ಎಟೋಲೋಲ್- ಎಎಂ25) ಈ ಔಷಧಿಗಳು ಮತ್ತು ಕಾಂತಿವರ್ಧಕಗಳನ್ನು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸುವ ಮೂಲಕ ಮಾರಾಟ ಮಾಡದಂತೆ ನಿರ್ಬಂಧ ಹೇರಲಾಗಿದೆ.
ಈ ಔಷಧಿ ಮತ್ತು ಕಾಂತಿವರ್ಧಕಗಳನ್ನು ನಿಷೇಧಿಸಿದ ಬಳಿಕವೂ ಔಷಧ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸದಂತೆ ಆದೇಶಿಸಲಾಗಿದೆ.
ಒಂದು ವೇಳೆ ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಸಹಾಯಕ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ ಸೂಚಿಸಲಾಗಿದೆ. ಸಾರ್ವಜನಿಕರು ಈ ಮೇಲಿನ ಔಷಧಿಗಳನ್ನು ಉಪಯೋಗಿಸದಿರುವುದು ಒಳಿತು. ಹೀಗೊಂದು ವೇಳೆ ವೈದ್ಯರು ಅಥವಾ ಮಾರಾಟಗಾರರು ಈ ನಿಷೇಧಿತ ಔಷಧಿಗಳನ್ನು ನೀಡಿದ್ದೇ ಆದರೆ ಸಂಬಂಧಪಟ್ಟ ಸಹಾಯಕ ಔಷಧ ನಿಯಂತ್ರಕರಿಗೆ ದೂರು ನೀಡಬೇಕಾಗಿದೆ.