News Kannada
Thursday, September 29 2022

ಬೆಂಗಳೂರು ನಗರ

ಸುಷ್ಮಿತಾ ಬೈದ್ಯರಿಗೆ ಮಿಸರ್ಸ್ ಇಂಡಿಯಾ ಗ್ಯಾಲೆಕ್ಸ್ ಪುರಸ್ಕಾರ - 1 min read

Photo Credit :

ಬೆಂಗಳೂರು : ಬೆಂಗಳೂರು ಮೂಲಕ ಸುಷ್ಮಿತಾ ಬೈದ್ಯ ಅವರು “ಮಿಸರ್ಸ್ ಇಂಡಿಯಾ ಗ್ಯಾಲೆಕ್ಸಿ ಎಂಥೂಸಿಯಾಸ್ಟಿಕ್ 2021” ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.

ವೈಬ್ರೆಂಡ್ ಕಾನ್ಸೆಪ್ಟ್ಸ್ ನವದೆಹಲಿಯಲ್ಲಿ ಇತ್ತೀಚೆಗೆ ಭಾರತದ ಪ್ರಮುಖ ಪ್ರದರ್ಶನ “ಮಿಸರ್ಸ್ ಇಂಡಿಯಾ ಗ್ಯಾಲೆಕ್ಸಿ ಎಂಥೂಸಿಯಾಸ್ಟಿಕ್ 2021” ಆಯೋಜಿಸಿತ್ತು. ಸಂಸ್ಥೆಯ ನಿರ್ದೇಶಕರಾದ ಗಿನ್ನಿ ಕಪೂರ್ ಮತ್ತು ಗಗನ್ ದೀಪ್ ಕಪೂರ್ ಮಹಿಳಾ ಸಬಲೀಕರಣ ವಲಯದಲ್ಲಿ ಹಲವು ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಮಹಿಳೆಯರಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಚಟುವಟಿಕೆಗಳ ಆಯೋಜನೆಗೆ ಗಮನಹರಿಸಿದ್ದಾರೆ.

ಸಂತಸಕರ ಮತ್ತು ಪ್ರೇರಣಾದಾಯಕ ಜೀವನಕ್ಕಾಗಿ ಸಕಾರಾತ್ಮಕ ಆಲೋಚನೆ ಮತ್ತು ವಿಶ್ವಾಸ ಅತಿ ಮುಖ್ಯ ಎಂಬುದು ಗಿನ್ನಿ ಕಪೂರ್ ಅವರ ನಂಬಿಕೆ. ವೃತ್ತಿಪರ ಮಾಡೆಲ್ ಗಳಂತೆ ರಾಂಪ್ ನಡಿಗೆ ಹಾಕಬಯಸುವ ವಿವಾಹಿತ ಮಹಿಳೆಯರಿಗೆ ಮಿಸರ್ಸ್ ಇಂಡಿಯಾ ಗ್ಯಾಲೆಕ್ಸ್ ಅವಕಾಶ ಒದಗಿಸಿದೆ. ವಯಸ್ಸು, ತೂಕ, ಎತ್ತರದ ನಿಯಮಗಳನ್ನು ಬದಿಗೆ ಸರಿಸಿ ದೇಶದ ವಿವಿಧ ಭಾಗಗಳ ಮಹಿಳೆಯರ ಪ್ರತಿಭಾ ಪ್ರದರ್ಶನ ಇದು ವೇದಿಕೆ ಒದಗಿಸಿದೆ.

ಕಳೆದ ಮೂರು ತಿಂಗಳಲ್ಲಿ ವ್ಯಕ್ತಿತ್ವ ವಿಕಸನಕ್ಕೆ, ವಿಶ್ವಾಸ ಹೆಚ್ಚಳಕ್ಕೆ ಮತ್ತು ವೃತ್ತಿಪರ ಮಾಡೆಲ್ ಗಳಂತೆ ವೃತ್ತಿ ನಿರ್ಮಾಣ ಸಂಬಂಧ ಕೌಶಲ್ಯ ತರಬೇತಿ ನೀಡಲಾಯಿತು.

ಮಿಸ್ಟರ್ ಸೂಪರ್ ಮಾಡೆಲ್ ಯೂನಿವರ್ಸ್ 2016, ಮಿಸರ್ಸ್ ಯೂನಿವರ್ಸ್ ಅಮಿತಾ ಪಾಂಡಾ ಈ ಸೌಂದರ್ಯ ಸ್ಪರ್ಧೆಯ ತೀರ್ಪುಗಾರರಾಗಿದ್ದರು.

See also  ರಾಜ್ಯದಲ್ಲಿ ವಿದ್ಯಾಗಮ ಕಲಿಕೆ ಮರು ಜಾರಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು