ಬೆಂಗಳೂರು: ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಅರಕೆರೆ ಗೇಟ್ ಬಳಿಯಲ್ಲಿರುವಂತ ಸೌತ್ ಇಂಡಿಯಲ್ ಶಾಪಿಂಗ್ ಮಾಲ್ ನಲ್ಲಿ ಮಧ್ಯರಾತ್ರಿ 3 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯಿಂದಾಗಿ ಶಾಪಿಂಗ್ ಮಾಲ್ ಧಗಧಗಿಸಿ ಹೊತ್ತಿ ಉರಿಯುತ್ತಿದೆ.
ಬೆಂಕಿ ಅವಘಡವನ್ನು ಗಮನಿಸಿದಂತ ಸ್ಥಳೀಯರು ಅಗ್ನಿಶಾಮಕ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ 6 ಅಗ್ನಿ ಶಾಮಕ ವಾಹನಗಳು ಆಗಮಿಸಿ, ಬೆಂಕಿಯನ್ನು ನಂದಿಸೋ ಕಾರ್ಯದಲ್ಲಿ ನಿರತವಾಗಿವೆ. ಈ ಸಂಬಂಧ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.