News Kannada
Sunday, May 15 2022
ಬೆಂಗಳೂರು ನಗರ

ಕೋವಿಡ್ ಹಿನ್ನೆಲೆ, ಶಾಲೆಗಳಿಗೆ ನಿಯಮ ಪ್ರಕಟಿಸಿದ ಸರ್ಕಾರ

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ರಾಜ್ಯದ ಕೋವಿಡ್ 19 ಸ್ಥಿತಿಗತಿ ಕುರಿತು ಗೃಹ ಕಚೇರಿ ಕೃಷ್ಣಾದಲ್ಲಿ ಸಭೆ ನಡೆಸಿದರು. ತಜ್ಞರ ವರದಿ ಸೇರಿದಂತೆ ಹಲವಾರು ವಿಚಾರಗಳ ಆಧಾರದಲ್ಲಿ ರಾಜ್ಯದಲ್ಲಿ ಜಾರಿಯಲ್ಲಿದ್ದ ವಾರಾಂತ್ಯದ ಕರ್ಫ್ಯೂವನ್ನು ತೆರವು ಮಾಡಲು ಸರ್ಕಾರ ನಿರ್ಧರಿಸಿದೆ.

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡೊದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ನಾಗೇಶ್, ಬೆಂಗಳೂರಿನಲ್ಲಿ ಜ.29ರವರೆಗೆ ಶಾಲೆಗಳನ್ನು ತೆರಯುವಂತಿಲ್ಲ. ಮುಂದಿನ ಶುಕ್ರವಾರ (ಜ.28)ದಂದು ಸಭೆ ನಡೆಸಿ ಮುಂದಿನ ನಿರ್ಧಾರ ಪ್ರಕಟಿಸುವುದಾಗಿ ಹೇಳಿದರು.

ಬೆಂಗಳೂರು ಬಿಟ್ಟು ಎಲ್ಲ ಕಡೆ ಶಾಲೆಯನ್ನು ಒಂದು ಯುನಿಟ್ ಎಂದು ಪರಿಗಣಿಸಲಾಗುವುದು. ಶಾಲೆಯಲ್ಲಿ ಕಡಿಮೆ ಪ್ರಕರಣ ಕಂಡು ಬಂದರೆ 3 ದಿನ ಬಂದ್, ಹೆಚ್ಚಿನ ಸಂಖ್ಯೆಯಲ್ಲಿ ಪ್ರಕರಣ ಕಂಡುಬಂದರೆ ಏಳು ದಿನ ಬಂದ್ ಮಾಡಿ ಮತ್ತೆ ಆರಂಭವಾಗಲಿದೆ ಎಂದು ಹೇಳಿದರು.

533104 ಜನರನ್ನು ಪರೀಕ್ಷೆ ಮಾಡಲಾಗಿದೆ 5.94% ಪೊಸಿಟಿವ್ ಬಂದಿದೆ. 1-10 ವಿದ್ಯಾರ್ಥಿಗಳು 5.9% ಇದೆ. ಬೆಂಗಳೂರಿನಲ್ಲಿ 14.12% ಇದೆ. 6 ಜಿಲ್ಲೆಗಳಲ್ಲಿ 9% ರಷ್ಟಿದೆ. 13 ಜಿಲ್ಲೆಗಳಲ್ಲಿ 9 % ಗಿಂತ ಕಡಿಮೆ ಇದೆ. ಉಳಿದ ಜಿಲ್ಲೆಗಳಲ್ಲಿ 5% ಕ್ಕಿಂತ ಕಡಿಮೆ ಇದೆ ಎಂದು ಸಚಿವರು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.