News Kannada
Saturday, October 08 2022

ಬೆಂಗಳೂರು ನಗರ

ನಕಲಿ ಅಂಕಪಟ್ಟಿ ನೀಡುತ್ತಿದ್ದ ಜಾಲವನ್ನು ಭೇದಿಸಿದ ಪೊಲೀಸರು: ನಾಲ್ವರು ಬಂಧನ - 1 min read

Photo Credit :

ಬೆಂಗಳೂರು : ನಕಲಿ ಅಂಕಪಟ್ಟಿ ತಯಾರಿಸಿ ಮಾರುತ್ತಿದ್ದ ಜಾಲವನ್ನು ಜಯನಗರ ‍ಪೊಲೀಸರು ಭೇದಿಸಿದ್ದು, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 200 ನಕಲಿ ಅಂಕಪಟ್ಟಿಗಳು ಹಾಗೂ ₹ 4.60 ಲಕ್ಷ ನಗದು ಜಪ್ತಿ ಮಾಡಲಾಗಿದೆ’ ಎಂದು ಪೊಲೀಸರು ಹೇಳಿದರು.

‘ದೇಶದ ವಿವಿಧ ವಿಶ್ವವಿದ್ಯಾಲಯಗಳ ಹೆಸರಿನಲ್ಲಿ ನಕಲಿ ಅಂಕಪಟ್ಟಿ ಹಾಗೂ ಪ್ರಮಾಣಪತ್ರಗಳನ್ನು ಆರೋಪಿಗಳು ತಯಾರಿಸುತ್ತಿದ್ದರು. ಜಯನಗರದ ಮೂರನೇ ಹಂತದ ಕಾಲೇಜೊಂದರ ಬಳಿ ನಿಂತಿದ್ದ ಆರೋಪಿಯೊಬ್ಬ, ರಸ್ತೆಯಲ್ಲಿ ಓಡಾಡುವ ವಿದ್ಯಾರ್ಥಿಗಳನ್ನು ತಡೆದು ಮಾತನಾಡಿಸುತ್ತಿದ್ದ.’

‘ಕಾಲೇಜಿಗೆ ಹೋಗದೇ ಅಂಕಪಟ್ಟಿ ನೀಡುವುದಾಗಿ ಆರೋಪಿ ಆಮಿಷವೊಡ್ಡುತ್ತಿದ್ದ. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಯಿತು’ ಎಂದರು.

₹ 40 ಸಾವಿರಕ್ಕೆ ಮಾರಾಟ: ‘ಕಂಪ್ಯೂಟರ್, ಪ್ರಿಂಟರ್ ಹಾಗೂ ಇತರೆ ತಾಂತ್ರಿಕ ಸಾಧನಗಳನ್ನು ಹೊಂದಿದ್ದ ಆರೋಪಿಗಳು, ಅದರ ಮೂಲಕ ಅಂಕಪಟ್ಟಿ ಹಾಗೂ ಪ್ರಮಾಣ ಪತ್ರ ತಯಾರಿಸುತ್ತಿದ್ದರು. ಒಂದು ಅಂಕಪಟ್ಟಿ ಅಥವಾ ಪ್ರಮಾಣಪತ್ರವನ್ನು ₹ 20 ಸಾವಿರದಿಂದ ₹ 40 ಸಾವಿರಕ್ಕೆ ಮಾರಾಟ ಮಾಡುತ್ತಿದ್ದರು’ ಎಂದರು.

‘ಕರ್ನಾಟಕ ಮುಕ್ತ ವಿಶ್ವವಿದ್ಯಾಲಯ, ಕುವೆಂಪು ವಿಶ್ವವಿದ್ಯಾಲಯ, ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಕಲ್ ಸೈನ್ಸ್, ಡಾ. ಸಿ.ವಿ.ರಾಮನ್ ವಿಶ್ವವಿದ್ಯಾಲಯ, ರವೀಂದ್ರನಾಥ್ ಠಾಗೂರ್ ವಿಶ್ವವಿದ್ಯಾಲಯದ ಎಲ್ಲ ಕೋರ್ಸ್‌ಗಳ ಅಂಕಪಟ್ಟಿಗಳು ಆರೋಪಿಗಳ ಬಳಿ ಸಿಕ್ಕಿವೆ. ಇವುಗಳನ್ನು ಬಳಸಿ ಕೆಲ ಅಭ್ಯರ್ಥಿಗಳು, ಕೆಲಸ ಗಿಟ್ಟಿಸಿಕೊಂಡಿರುವುದು ಗೊತ್ತಾಗಿದೆ’ ಎಂದರು.

 

See also  ರಾಜ್ಯದ ವಿಮಾನ, ರೈಲ್ವೆ ನಿಲ್ದಾಣಗಳಿಗೆ ಹೆಚ್ಚಿದ ಭದ್ರತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು