ಬೆಂಗಳೂರು: ಬೆಂಗಳೂರು ಈಗ ಐಸಿಯುನಲ್ಲಿದೆ. ಮುಂಚೆ ಗಾರ್ಡನ್ ಸಿಟಿ ಆಗಿದ್ದ ಬೆಂಗಳೂರು ಆಮೇಲೆ ಗಾರ್ಬೇಜ್ ಸಿಟಿ ಆಯಿತು, ಈಗ ಗಾಂಜಾ ಸಿಟಿ ಆಗಿದೆ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ಈಗ ಐಸಿಯುನಲ್ಲಿದೆ. ಬೆಂಗಳೂರಿನ ಪರಿಸ್ಥಿತಿ ಕೆಡುತ್ತಿದೆ ಇದನ್ನು ನಾವು ಹೇಳುತ್ತಿಲ್ಲ, ವರದಿ ಹೇಳುತ್ತಿದೆ ಎಂದರು. ಪ್ರಧಾನಿ ನರೇಂದ್ರ ಮೋದಿಯವರು ಬೆಂಗಳೂರಿಗೆ ಬಂದಾಗ ದುರಸ್ತಿಗೊಳಿಸಿದ್ದ ರಸ್ತೆಯೇ ಕುಸಿದು ಹೋಯ್ತು. ಡಾಂಬರ್ ಒಂದೇ ದಿನಕ್ಕೆ ಕಿತ್ತು ಹೋಯ್ತು. ಇಂದು ಬೆಂಗಳೂರಿನಲ್ಲಿ ರಸ್ತೆಗುಂಡಿಗಳಿಂದ ಸಾವು ಸಂಭವಿಸುತ್ತಿದೆ ಎಂದು ಅವರು ಟೀಕಿಸಿದ್ದಾರೆ.
ಬೆಂಗಳೂರಿನ ಮೂಲಸೌಕರ್ಯಗಳ ಕೊರತೆಯ ಲಾಭವನ್ನು ದೆಹಲಿ, ಮುಂಬೈ, ಚೆನ್ನೈ ಪಡೆಯುತ್ತಿವೆ. ದೆಹಲಿಯಲ್ಲಿ 5 ಸಾವಿರ ಸ್ಟಾರ್ಟ್ಅಪ್ಸ್ ಪ್ರಾರಂಭವಾಗಿವೆ. ಬೆಂಗಳೂರಿನಲ್ಲಿ ಕೇವಲ 4,500 ಸ್ಟಾರ್ಟ್ ಅಪ್ ಆರಂಭವಾಗಿದೆ. ಬೆಂಗಳೂರಿನ ಐಟಿ ಹಬ್ ಎಲ್ಲಿಗೆ ಹೋಗ್ತಿದೆ? ಎಂದು ಅವರು ಟೀಕಿಸಿದ್ದಾರೆ.