ಬೆಂಗಳೂರು: ರಾಜ್ಯ ತೋಟಗಾರಿಕೆ ಇಲಾಖೆ ಎರಡು ವರ್ಷಗಳ ನಂತರ ವಾರ್ಷಿಕ ಸ್ವಾತಂತ್ರ್ಯೋತ್ಸವ ಫಲಪುಷ್ಪ ಪ್ರದರ್ಶನಕ್ಕೆ ಸಜ್ಜಾಗಿದೆ. ಈ ವರ್ಷದ ಫಲಪುಷ್ಪ ಪ್ರದರ್ಶನವನ್ನು ದಿವಂಗತ ಪುನೀತ್ ರಾಜ್‌ಕುಮಾರ್ ಅವರಿಗೆ ಅರ್ಪಿಸಲಾಗುವುದು.
ಅಧಿಕಾರಿಗಳ ಪ್ರಕಾರ, ಈ ವರ್ಷ ಹೂವಿನ ಪ್ರದರ್ಶನವು ಆಗಸ್ಟ್ 5 ರಂದು ಪ್ರಾರಂಭವಾಗಲಿದೆ ಮತ್ತು ಆಗಸ್ಟ್ 15 ರವರೆಗೆ ನಗರದ ಲಾಲ್ಭಾಗ್ನಲ್ಲಿ ಮುಂದುವರಿಯುತ್ತದೆ.
ಈ ವರ್ಷದ ಪ್ರದರ್ಶನದ ಪ್ರಮುಖ ಅಂಶವೆಂದರೆ ವಿವಿಧ ಹೂವುಗಳಿಂದ ಮಾಡಿದ ಪುನೀತ್ ರಾಜ್‌ಕುಮಾರ್ ಅವರ ಪ್ರತಿಮೆ. ಡಾ.ರಾಜ್ ಕುಟುಂಬದ ಗಾಜನೂರಿನ ಮನೆಯ ಪ್ರತಿಕೃತಿಯನ್ನೂ ಹೂಗಳನ್ನು ಬಳಸಿ ರಚಿಸಲಾಗುವುದು.
ಆಗಸ್ಟ್ 5 ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟಿಸುವರು.
ಕೋವಿಡ್ 19 ಪ್ರೋಟೋಕಾಲ್ ಪ್ರಕಾರ ಕಳೆದ ಎರಡು ವರ್ಷಗಳಿಂದ ಫಲಪುಷ್ಪ ಪ್ರದರ್ಶನವನ್ನು ರದ್ದುಗೊಳಿಸಲಾಗಿತ್ತು ಎಂಬುದನ್ನು ಸ್ಮರಿಸಬಹುದು.