News Kannada
Wednesday, August 10 2022

ಬೆಂಗಳೂರು ನಗರ

ಬೆಂಗಳೂರು: ವರ್ಬ್ಯಾಟಲ್ ಡಿಬೇಟ್ ಚಾಂಪಿಯನ್ ಶಿಪ್ ನಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳು - 1 min read

Bangalore: Students of Vidyashilpa Academy won the title in the Verbatal Debate Championship

ಬೆಂಗಳೂರು, ಆ.3: ರಾಜ್ಯಮಟ್ಟದ ವರ್ಬ್ಯಾಟಲ್ ಡಿಬೇಟ್ ಚಾಂಪಿಯನ್ ಶಿಪ್ ನ ಕರ್ನಾಟಕ 2022ರ ನ 18ನೆಯ ಆವೃತ್ತಿಯಲ್ಲಿ ವಿದ್ಯಾಶಿಲ್ಪ ಅಕಾಡೆಮಿಯ ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡರು.

ಇಂದು ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ಕೊಂಡಜ್ಜಿ ಬಸಪ್ಪ ಸಭಾಂಗಣದಲ್ಲಿ ನಡೆದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ಬಿಗಿನರ್ಸ್ ವಿಭಾಗದಲ್ಲಿ ಪಿಯಾ ಹಾಗೂ ತಾಶಿ ಮತ್ತು ಜ್ಯೂನಿಯರ್ ವಿಭಾಗದಲ್ಲಿ ಆದ್ಯಾ ಹಾಗೂ ಆಯ್ಮನ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾದರು.

ವರ್ಬ್ಯಾಟಲ್ ಸಂಸ್ಥೆಯ ಸಂಸ್ಥಾಪಕ ರಾದ ದೀಪಕ್ ತಿಮ್ಮಯ್ಯ ಮಾತನಾಡಿ, ಬಿಗಿನರ್ಸ್ ವಿಭಾಗದಲ್ಲಿ ಒಟ್ಟು 47 ಮಂದಿ ಪಾಲ್ಗೊಂಡಿದ್ದರು ಹಾಗೂ ಜ್ಯೂನಿಯರ್ ವಿಭಾಗದಲ್ಲಿ 173 ಮಂದಿ ಪಾಲ್ಗೊಂಡಿದ್ದರು. ಒಟ್ಟು 51 ಶಾಲೆಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ರಾಮಕೃಷ್ಣ ಉಪಾಧ್ಯಾಯ, ಸುನಿಲ್ ರಾಜಶೇಖರ್, ಹಂಸ್ವರ್ಧನ್, ವಿನಾಯಕ ರಾಮಕೃಷ್ಣ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.

ಬಿಗಿನರ್ ವಿಭಾಗದ ವಿಜೇತರಿಗೆ 20,000 ಹಾಗೂ ಜ್ಯೂನಿಯರ್ ವಿಭಾಗದ ವಿಜೇತರಿಗೆ 1ಲಕ್ಷ ಮೊತ್ತವನ್ನು ಬಹುಮಾನವಾಗಿ ನೀಡಲಾಯಿತು. ಎಂಟರಿಂದ 12 ವರ್ಷದ ಮಕ್ಕಳು ಬಿಗಿನರ್ ವಿಭಾಗದಲ್ಲೂ 12ರಿಂದ 16ರ ವಯಸ್ಸಿನ ಮಕ್ಕಳು ಜ್ಯೂನಿಯರ್ ವಿಭಾಗದಲ್ಲೂ ಪಾಲ್ಗೊಂಡಿದ್ದರು ಎಂದರು.

See also  ಹಿಜಾಬ್ ವಿವಾದವನ್ನು ಕಾಂಗ್ರೆಸ್ ತನ್ನ ಅನುಕೂಲಕ್ಕೆ ತಕ್ಕಂತೆ ಬಳಸುತ್ತಿದೆ: ಸಚಿವ ಈಶ್ವರಪ್ಪ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles
Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು