News Kannada
Thursday, December 01 2022

ಬೆಂಗಳೂರು ನಗರ

ಬೆಂಗಳೂರು: ಹಿಮಾಲಯನ್ ಸಿದ್ಧ ಅಕ್ಷರ್ ಅವರ ‘ದಿ ಸೈನ್ಸ್ ಆಫ್ ಮುದ್ರಾಸ್’ ಕೃತಿ ಬಿಡುಗಡೆ

Photo Credit : By Author

ಬೆಂಗಳೂರು: ಯೋಗ ಮುದ್ರೆಗಳ ಪ್ರಾಮುಖ್ಯತೆಯನ್ನು ಎಲ್ಲೆಡೆ ತಿಳಿಸುವ ಸಲುವಾಗಿ ಅಕ್ಷರ ಯೋಗ ಸಂಸ್ಥೆಯು ಹಿಮಾಲಯನ್ ಸಿದ್ಧ ಅಕ್ಷರ್ ಬರೆದಿರುವ ದಿ ಸೈನ್ಸ್ ಆಫ್ ಮುದ್ರಾಸ್-ದಿ ಟೀಚಿಂಗ್ಸ್ ಆಫ್ ಹಿಮಾಲಯಸ್ (ಸಂಪುಟ 1) ಅನ್ನು ಅಕ್ಟೋಬರ್ 8, 2022ರಂದು ಬಿಡುಗಡೆ ಮಾಡಲಾಯಿತು. ಇದನ್ನು ಕ್ಲೆವರ್ ಫಾಕ್ಸ್ ಪಬ್ಲಿಷಿಂಗ್ ಹೌಸ್ ಸಂಸ್ಥೆಯು ಪ್ರಕಟಿಸಿದೆ.

ಆರೋಗ್ಯವೇ ಭಾಗ್ಯ ಎಂಬ ಮಾತಿದೆ.ಉತ್ತಮವಾದ ಆರೋಗ್ಯವಿದ್ದರೆ ಖುಷಿಯೂ ಇರುತ್ತದೆ. ಹಾಗಾಗಿ ಜೀವನದಲ್ಲಿ ಆರೋಗ್ಯವೇ ನಮ್ಮ ದೊಡ್ಡ ಆಸ್ತಿ ಎನ್ನಬಹುದು.ಇಂದು ಕಳಪೆ ಜೀವನಶೈಲಿ, ಅತೀಯಾದ ಕೆಲಸದ ಒತ್ತಡದಿಂದ ಆರೋಗ್ಯವು ಹದಗೆಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದಕ್ಕಾಗಿ ಜನರು ಅಲೋಪತಿ, ಆಯುರ್ವೇದ ಹೋಮಿಯೋಪತಿ, ಯೋಗ ಇತ್ಯಾದಿ ಚಿಕಿತ್ಸೆ ವಿಧಾನಗಳತ್ತ ಮುಖ ಮಾಡುತ್ತಿದ್ದಾರೆ. ಯೋಗ ನಮ್ಮ ಜೀವನದಲ್ಲಿ ಮಹತ್ತರವಾದ ಪರಿವರ್ತನೆಯನ್ನು ತರುತ್ತದೆ. ಪ್ರಾಣಾಯಾಮ, ಮುದ್ರಾ, ಧ್ಯಾನ ಮುಂತಾದ ಯೋಗ ತಂತ್ರಗಳು ಆರೋಗ್ಯವನ್ನು ಉತ್ತಮಪಡಿಸುವಲ್ಲಿ ಸಹಾಯಕಾರಿಯಾಗಿವೆ. ಯೋಗವು ವಿಶ್ವ ಪ್ರಸಿದ್ಧ ಸಮಗ್ರ ಅಭ್ಯಾಸವಾಗಿದೆ ಹಾಗೂ ಈ ವಿಶಿಷ್ಟ ಪುಸ್ತಕವು ಮುದ್ರೆಗಳ ಪ್ರಯೋಜನ ಹಾಗೂ ಪ್ರಾಯೋಗಿಕ ಅನ್ವಯಗಳನ್ನು ತಿಳಿಸುತ್ತದೆ. ಕಾಡುವ ದೈಹಿಕ, ಮಾನಸಿಕ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತ ಪಡೆಯಲು ಮುದ್ರೆಗಳು ತಮ್ಮದೇ ಆದ ರೀತಿಯಲ್ಲಿ ಪ್ರಭಾವ ಬೀರುತ್ತದೆ.

ಈ ಪುಸ್ತಕವು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸಿದ ಕ್ಷೇಮ ತಂತ್ರಗಳೊಂದಿಗೆ ಮುಖ್ಯವಾದ ಸಂಪನ್ಮೂಲಗಳನ್ನು ಹೊಂದಿದೆ.ಯೋಗದಲ್ಲಿ ಮುದ್ರೆಗಳು “ನಾಡಿ ಸ್ಥಿತಿ” ಅಥವಾ ನಾಡಿ ಜಾಲ (ನರ ಚಾನಲ್ ಗಳು) ಎಂದು ಕರೆಯಲ್ಪಡುವ ಶಕ್ತಿಯುತ ಸರ್ಕ್ಯೂಟ್ ಗಳ ಮೇಲೆ ಪರಿಣಾಮ ಬೀರುತ್ತವೆ. ಮನುಷ್ಯನ ದೇಹವು ಈ ಚಾನಲ್ ಗಳನ್ನು ಒಳಗೊಂಡಿದ್ದು ಇದು ಪ್ರಾಣಿಕ್ ಹರಿವನ್ನು ಸುಧಾರಿಸಲು ಸಂಪರ್ಕ ಹೊಂದಿದೆ. ನಮ್ಮ ಪುರಾತನ ಕಾಲದ ಯೋಗಿಗಳು ನಮ್ಮ ಕೈಯಲ್ಲಿರುವ ನರಗಳ ನಡುವಿನ ಪರಸ್ಪರ ಕ್ರಿಯೆಯಿಂದ ನರವೈಜ್ಞಾನಿಕ ವ್ಯವಸ್ಥೆಯು ಹೇಗೆ ಪರಿಣಾಮ ಬೀರುತ್ತದೆ ಎಂಬುದರ ಕುರಿತು ವ್ಯಾಪಕವಾದ ಸಂಶೋಧನೆಯನ್ನು ಮಾಡಿದ್ದಾರೆ. ದೇಹದಲ್ಲಿ ಪ್ರಾಣದ ಸರ್ಕ್ಯೂಟ್ ಅನ್ನು ಸಕ್ರಿಯಗೊಳಿಸಲು ಮತ್ತು ಸ್ಥಾಪಿಸಲು ಮುದ್ರೆಯನ್ನು ಬಳಸಲಾಗುತ್ತದೆ. ವಿವಿಧ ದೇಹ ವ್ಯವಸ್ಥೆಗಳ ಮೇಲೆ ಸೂಕ್ಷ್ಮವಾದ ರೀತಿಯಲ್ಲಿ ಪ್ರಭಾವಗಳನ್ನು ಬೀರಲು ಈ ಸರ್ಕ್ಯೂಟ್ ಗಳು ಪ್ರಾಣವನ್ನು ನಿರ್ಧಿಷ್ಟ ರೀತಿಯಲ್ಲಿ ಬಳಸುತ್ತವೆ.

ಬೆರಳುಗಳ ತುದಿಯನ್ನು ಸಾಮಾನ್ಯವಾಗಿ “ಮೂಲ್ “ ಎಂದು ಕರೆಯಲಾಗುತ್ತದೆ. ಅಲ್ಲಿ ಅಂಶಗಳು ಕೇಂದ್ರೀಕೃತವಾಗಿದ್ದು ಅವುಗಳು ಈ ಕೆಳಗಿನ ವಿಧಾನಗಳಲ್ಲಿ ಹಲವಾರು ಸಾರ್ವತ್ರಿಕ ಅಂಶಗಳಿಗೆ ಸಂಬಂಧಿಸಿವೆ.

• ಹೆಬ್ಬೆರಳನ್ನು ಸಂಸ್ಕೃತದಲ್ಲಿ ಬೆಂಕಿ ಅಥವಾ “ಅಗ್ನಿ” ಎಂಬ ಅಂಶವನ್ನು ಪ್ರತಿನಿಧಿಸುತ್ತದೆ ಹಾಗೂ ಶಾಖದ ಮೂಲವಾಗಿ ಇದು ಕಾರ್ಯನಿರ್ವಹಿಸುತ್ತದೆ.

• ಏರ್ ಎಂಬ ಅಂಶದ ಸಂಸ್ಕೃತ ಪದ “ವಾಯು” ಅನ್ನು ತೋರು ಬೆರಳಿನಿಂದ ಪ್ರತಿನಿಧಿಸಲಾಗುತ್ತದೆ. ಇದು ನಿಮ್ಮ ದೇಹದಲ್ಲಿರುವ ಯಾವುದೇ ಅನಿಲ ಪದಾರ್ಥಕ್ಕೆ ಸಮನಾಗಿರುತ್ತದೆ.

• “ಆಕಾಶ್” ಎಂದು ಕರೆಯಲ್ಪಡುವ ಮಧ್ಯದ ಬೆರಳು “ಈಥರ್ “ ಅಂಶವನ್ನು ಪ್ರತಿನಿಧಿಸುತ್ತದೆ.

See also  ಬೆಂಗಳೂರು: ಅಕ್ಟೋಬರ್‌ನಲ್ಲಿ ಬಸ್ ಯಾತ್ರೆ ಆರಂಭಿಸಲು ಸಜ್ಜಾದ ಕಾಂಗ್ರೆಸ್!

• ಉಂಗುರದ ಬೆರಳು ಅಥವಾ ಸಂಸ್ಕೃತದಲ್ಲಿ “ಪೃಥ್ವಿ” , “ಭೂಮಿ” ಎಂಬ ಅಂಶವನ್ನು ಪ್ರತಿನಿಧಿಸುತ್ತದೆ. ಇದು ನಮ್ಮ ದೇಹದಲ್ಲಿರುವ ಘನ ಅಂಶಕ್ಕೆ ಸಮನಾದದ್ದು.

• ಇನ್ನು ಕಿರುಬೆರಳು ಅಥವಾ ಸಂಸ್ಕೃದಲ್ಲಿ “ಜಲ್” ಇದು ನೀರನ್ನು ಪ್ರತಿನಿಧಿಸುತ್ತದೆ. ನೀರು ಅತ್ಯಂತ ಅಗತ್ಯವಾದ ಅಂಶಗಳಲ್ಲಿ ಒಂದಾಗಿದೆ. ಎಲ್ಲಾ ಜೀವಿಗಳು ಬದುಕಲು ನೀರು ತುಂಬಾನೇ ಅವಶ್ಯಕವಾಗಿದೆ.

• ಪುಸ್ತಕದ ಮೊದಲ ಸಂಪುಟವು ಯೋಗ ವಿಜ್ಞಾನದಲ್ಲಿನ ಮುದ್ರೆಗಳ ಕುರಿತಾಗಿದೆ. ಹೇಗೆ ಈ ಮುದ್ರೆಗಳನ್ನು ಬಳಸಿಕೊಳ್ಳುವುದು ಎಂಬುದರ ಕುರಿತು ಸಮಗ್ರ ಸೂಚನೆಗಳಿವೆ. ಸೂರ್ಯ ಮುದ್ರೆ (ಸೂರ್ಯ), ಪೃಥ್ವಿ ಮುದ್ರೆ (ಭೂಮಿ), ವಾಯು ಮುದ್ರೆ (ಗಾಳಿ), ಅಗ್ನಿ ಮುದ್ರೆ (ಬೆಂಕಿ), ಆಕಾಶ್ ಮುದ್ರೆ (ಬ್ರಹ್ಮಾಂಡ/ಬಾಹ್ಯಾಕಾಶ) ಮತ್ತು ಜಲ ಮುದ್ರೆ (ನೀರು) ಇವುಗಳ ಕುರಿತು 51 ಮುದ್ರೆಗಳಲ್ಲಿ ತಿಳಿಸಲಾಗಿದೆ.

ಇನ್ನು ಈ ಪುಸ್ತಕವು ಜ್ಞಾನ ಮುದ್ರೆ, ಧ್ಯಾನ ಮುದ್ರೆ, ಪ್ರಾಣ ಮುದ್ರೆ ವಿವಿಧ ಸರಳ ಮುದ್ರೆಗಳ ಅಭ್ಯಾಸದ ತಂತ್ರಗಳನ್ನು ಹೊಂದಿದೆ. ಇದರ ಅಭ್ಯಾಸದಿಂದ ಸರಳವಾಗಿ ಕಲಿಯುವದ ಜೊತೆಗೆ ಜೊತೆಗೆ ಉತ್ಸಾಹವನ್ನು ನೀಡುತ್ತದೆ.

ಈ ಪುಸ್ತಕದ ಕುರಿತು ನೀವು ಮತ್ತಷ್ಟು ಅಧ್ಯಯನ ಮಾಡಿದಾಗ ಇನ್ನಷ್ಟು ಹೆಚ್ಚಿನ ಪ್ರಯೋಜನಗಳನ್ನು ಹೊಂದಿರುವ ಗರುಡ ಮುದ್ರೆ, ಶಂಖ ಮುದ್ರೆಯಂತಹ ಸವಾಲಿನ ಮುದ್ರೆಗಳನ್ನು ಕಲಿಯಬಹುದು. ಈ ಪುಸ್ತಕದಲ್ಲಿರುವ ಮುದ್ರೆಗಳಿಂದ ನಮ್ಮ ಜೀವನಶೈಲಿಯಿಂದ ಎದುರಿಸುತ್ತಿರುವ ಸಾಕಷ್ಟು ಸವಾಲುಗಳಿಗೆ ಇದು ಸಹಾಯ ಮಾಡುತ್ತದೆ.

ಯೋಗ ಸಂಸ್ಕೃತಿ ಮತ್ತು ಸಂಪ್ರದಾಯವು ದೇಹ ಹಾಗೂ ಬುದ್ಧಿಶಕ್ತಿ ಎರಡನ್ನೂ ಪೋಷಿಸುವ ಹಾಗೂ ಹೆಚ್ಚಿಸುವ ಅಗತ್ಯದ ಕುರಿತು ತಿಳಿಸುತ್ತದೆ. ಆರೋಗ್ಯ ಮತ್ತು ಅದರ ಮಹತ್ವದ ಕುರಿತ ಸಂವಾದಗಳು ಇಂದು ಹೆಚ್ಚು ಪ್ರಚಲಿತವಾಗುತ್ರತಿವೆ. ಯೋಗದ ಆಧ್ಯಾತ್ಮಿಕ ಮತ್ತು ಪ್ರಾಯೋಗಿಕ ಅಂಶವು ಎಲ್ಲಾ ವಯಸ್ಸಿನ ಜನರ ಮೇಲೆ ಪರಿಣಾಮ ಬೀರುವ ಒತ್ತಡ, ದುಃಖ ಮತ್ತು ಆತಂಕದ ತೊಂದರೆಗಳಿಂದ ಹೇಗೆ ಸಮತೋಲನ ಕಾಯ್ದುಕೊಳ್ಳಬಹುದು ಎಂಬುದರ ಕುರಿತು ನಮಗೆ ಕಲಿಸುತ್ತದೆ.

ಯೋಗ ಹಾಗೂ ಆಧ್ಯಾತ್ಮಕ ಗುರು ಬರೆದಿರುವ ಈ ಪುಸ್ತಕವು ಅಮೆಜಾನ್ ನಲ್ಲಿ ಲಭ್ಯವಿದೆ.

ಹೆಚ್ಚಿನ ಮಾಹಿತಿಗಾಗಿ www.thescienceofmudras.com ಭೇಟಿ ನೀಡಿ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

11671
Media Release

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು