News Kannada
Friday, December 09 2022

ಬೆಂಗಳೂರು ನಗರ

ಇಂದು ಚಿನ್ನ ಖರೀದಿಸುವವರಿಗೆ ಕಹಿಸುದ್ದಿ: ಇಳಿಕೆ ಕಂಡಿದ್ದ ಬಂಗಾರದ ಬೆಲೆಯಲ್ಲಿ ಮತ್ತೆ ಏರಿಕೆ

Bad news for gold buyers today: Gold prices rise again after falling
Photo Credit : News Kannada

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ರೂ. 48,600 ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 53,020 ರೂಪಾಯಿ ನಿಗದಿಯಾಗಿದೆ.

ಹೆಣ್ಣುಮಕ್ಕಳ ಅಚ್ಚುಮೆಚ್ಚಿನ ಆಭರಣ. ಚಿನ್ನದ ಮೇಲೆ ಪ್ರೀತಿ ಇಲ್ಲದ ಹೆಂಗಳೆಯರು ಯಾರು ಹೇಳಿ. ಬಂಗಾರದ ಬೆಲೆ ಏರಿಕೆಯಾದ್ರೂ ಪರಿತಪಿಸೋ ಮಂದಿ ಚಿನ್ನ ಖರೀದಿಸಲು ಮಾತ್ರ ಹಿಂದೇಟು ಹಾಕುವುದಿಲ್ಲ. ವರ್ಷಾನುಗಟ್ಟಲೇ ಹಣವನ್ನು ಹೊಂದಿಸಿ ತಮಗಿಷ್ಟ ಬಂದಂತಹ ಆಭರಣವನ್ನು ಖರೀದಿಸಲು ಮುಂದಾಗುತ್ತಾರೆ. ಯಾರೆಲ್ಲಾ ಬಂಗಾರವನ್ನು ಖರೀದಿ ಮಾಡುತ್ತಾರೋ ಅವರು ಮಾತ್ರವಲ್ಲ ಪ್ರತಿಯೊಬ್ಬರಿಗೂ ಈ ದಿನದ ಬಂಗಾರದ ಬೆಲೆ ಎಷ್ಟಿದೆ ಅಂತಾ ತಿಳಿಯುವ ಕುತೂಹಲ ಇದ್ದೇ ಇರುತ್ತದೆ.

ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನು ಆಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ. ದೇಶದಲ್ಲಿ ಎಲ್ಲಾ ಕಡೆ ಒಂದೇ ರೀತಿ ಚಿನ್ನದ ಬೆಲೆಯಿರುವುದಿಲ್ಲ. ಆಯಾಯ ರಾಜ್ಯಗಳಲ್ಲಿ ಬೇಡಿಕೆಗೆ ತಕ್ಕಂತೆ ಚಿನ್ನದ ಬೆಲೆಯಲ್ಲಿ ವ್ಯತ್ಯಾಸವಿರುತ್ತದೆ. ಇಂದು ದೇಶದಲ್ಲಿ ಹಾಗೂ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಎಷ್ಟಿದೆ ಅನ್ನೋದನ್ನು ಇಲ್ಲಿ ತಿಳಿಯಿರಿ.

ಅಂದಹಾಗೆ, ಇಂದು ಶುಕ್ರವಾರ, ನವೆಂಬರ್ 25ರಂದು ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. ದೇಶದಲ್ಲಿ 1 ಗ್ರಾಂ (24 ಕ್ಯಾರಟ್‌) ಬಂಗಾರದ ಬೆಲೆ 5,297 ರೂ. ದಾಖಲಾಗಿದೆ.

ಇಂದು ಬೆಳಗಿನ ವೇಳೆಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ರೂ. 48,600 ನಿಗದಿಯಾಗಿದೆ. ಬೆಂಗಳೂರಿನಲ್ಲಿ 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 53,020 ರೂಪಾಯಿ ನಿಗದಿಯಾಗಿದೆ.

ಇನ್ನು ಚೆನ್ನೈನಲ್ಲಿ 10 ಗ್ರಾಂ (22 ಕ್ಯಾರಟ್) ಚಿನ್ನದ ಬೆಲೆಗೆ 49,310 ರೂ. ನಿಗದಿಯಾಗಿದ್ರೆ, 24 ಕ್ಯಾರಟ್ ಚಿನ್ನದ ಬೆಲೆ 53,780 ರೂ. ನಿಗದಿಯಾಗಿದೆ. ಹಾಗೆಯೇ ಮುಂಬೈನಲ್ಲಿ 10 ಗ್ರಾಂ ಚಿನ್ನದ ಬೆಲೆ 48,550 ರೂ. ಇದ್ದರೆ, 24 ಕ್ಯಾರಟ್ ಚಿನ್ನದ ಬೆಲೆ 52,970 ರೂ. ನಿಗದಿಯಾಗಿದೆ.

ಹಾಗೆಯೇ ಮಂಗಳೂರಿನಲ್ಲಿ 10 ಗ್ರಾಂ (22 ಕ್ಯಾರಟ್‌) ಚಿನ್ನದ ಬೆಲೆಗೆ ರೂ. 48,600 ನಿಗದಿಯಾಗಿದೆ. 10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆ 53,020 ರೂಪಾಯಿ ನಿಗದಿಯಾಗಿದೆ. ಮೈಸೂರಿನಲ್ಲೂ ಇದೇ ಮೊತ್ತ ದಾಖಲಾಗಿದೆ.

ಇನ್ನು ದೇಶದಲ್ಲಿ ಬೆಳ್ಳಿ ಬೆಲೆಯಲ್ಲೂ ಕೂಡ ಹಾವು ಏಣಿ ಆಟ ಮುಂದುವರಿದಿದೆ. ಇಂದು ದೇಶದಲ್ಲಿ ಬೆಳ್ಳಿ ಬೆಲೆ ಒಂದು ಕೆಜಿಗೆ 62,200 ರೂಪಾಯಿ ದಾಖಲಾಗಿದ್ದು, ಏರಿಕೆ ಕಂಡುಬಂದಿದೆ. ಬೆಂಗಳೂರು, ಮೈಸೂರು, ಮಂಗಳೂರಿನಲ್ಲಿ ಒಂದು ಕೆ.ಜಿ ಬೆಳ್ಳಿ ಬೆಲೆ 68,200 ರೂ. ದಾಖಲಾಗಿದ್ದು ಏರಿಕೆಯಾಗಿದೆ.

ಒಟ್ಟಿನಲ್ಲಿ ಇಂದು ಬೆಳಗಿನ ವೇಳೆಗೆ ದೇಶದಲ್ಲಿ ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬಂದಿದ್ರೆ, ಬೆಳ್ಳಿ ಬೆಲೆಯಲ್ಲೂ ಇಳಿಕೆಯಾಗಿದೆ. ಎಂದಿನಂತೆ ಬೆಳಗ್ಗೆ 11 ಗಂಟೆ ವೇಳೆಗೆ ಬೆಲೆ ವ್ಯತ್ಯಯವಾಗುವ ಸಾಧ್ಯತೆಯಿರುತ್ತದೆ.

See also  ನವದೆಹಲಿ: ಕಾಂಗ್ರೆಸ್ ನಾಯಕರ ಹೇಳಿಕೆಗೆ ಸೋನಿಯಾ ಕ್ಷಮೆಯಾಚಿಸಬೇಕು ಎಂದ ನಿರ್ಮಲಾ ಸೀತಾರಾಮನ್
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು