News Kannada
Sunday, January 29 2023

ಬೆಂಗಳೂರು ನಗರ

ಬೆಂಗಳೂರು: ರೈತರ ಉತ್ಪನ್ನ ಉತ್ತೇಜನಕ್ಕೆ “ಏಕರೂಪದ ಬ್ರಾಂಡಿಂಗ್”

Photo Credit : By Author

ಬೆಂಗಳೂರು: ಭಾರತದಲ್ಲಿ ಪ್ರಥಮ ಬಾರಿಗೆ ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಅತಿ ಸಣ್ಣ ರೈತರನ್ನು ಒಗ್ಗೂಡಿಸಿ ಅವರ ಉತ್ಪನ್ನಗಳಿಗೆ ವಿಶಿಷ್ಟ ಹಾಗೂ ವಿನೂತನವಾದ “ಏಕರೂಪದ ಬ್ರಾಂಡಿಂಗ್” ಅನ್ನು ವಿನ್ಯಾಸಗೊಳಿಸಿ ನೇರವಾಗಿ ಗ್ರಾಹಕರಿಗೆ ತಲುಪಿಸುವ ವ್ಯವಸ್ಥೆಯನ್ನು ರೂಪಿಸಲು ಕರ್ನಾಟಕ ರಾಜ್ಯ ಸರ್ಕಾರವು ಮುಂದಾಗಿದೆ.

ಕೃಷಿ ಮತ್ತು ಜಲಾನಯನ ಅಭಿವೃದ್ಧಿ ಇಲಾಖೆ ಪ್ರಾಯೋಜಿತ “ರೈತ ಉತ್ಪಾದಕ ಸಂಸ್ಥೆಗಳು ಕರ್ನಾಟಕ ರಾಜ್ಯಾದ್ಯಂತ “ರೈತ ಉತ್ಪಾದಕ ಸಂಸ್ಥೆ” ಗಳನ್ನು (Farmen Producer Organizations) ಸ್ಥಾಪಿಸಲು ಕರ್ನಾಟಕದ ವಿವಿಧ ಇಲಾಖೆಗಳ ಮೂಲಕ ಉತ್ತೇಜಿಸಲಾಗುತ್ತಿದೆ. ಕರ್ನಾಟಕ ರಾಜ್ಯ ಸರ್ಕಾರವು “ರೈತ ಉತ್ಪಾದಕ ಸಂಸ್ಥೆ”ಗಳ ಕನಸನ್ನು ಸಾಕಾರ ಗೊಳಿಸುವ ಸಲುವಾಗಿ ರಾಜ್ಯದ ರೈತರ ಉತ್ಪನ್ನಗಳಿಗೆ “ಏಕೀಕೃತ ಬ್ರಾಂಡ್” ಹೆಸರು ರೂಪಿಸಲು ಬಯಸಿದೆ.

ನಮ್ಮ ದೇಸೀತನವನ್ನು ಪ್ರತಿಬಿಂಬಿಸುವ ಕನ್ನಡತನವನ್ನು ಸಾರುವ ರೈತರು ಮತ್ತು ಗ್ರಾಹಕರಿಬ್ಬರಿಗೂ ಸಂಪರ್ಕ ಸೇತುವೆಯಂತೆ ಬೆಸೆಯುವ, ಜನಸಾಮಾನ್ಯರಿಗೆ ಹತ್ತಿರವಾಗುವ, ಕಣ್ಮನಸೆಳೆಯುವ ವಿನೂತನವಾದ ಒಂದು ಅಥವಾ ಹಲವು ಬ್ರಾಂಡ್ ಹೆಸರುಗಳನ್ನು ಸೂಚಿಸಿ, ರೈತರ ಉತ್ಪನ್ನಗಳಿಗೆ ಸ್ಪಂದಿಸುವ ಸಹೃದಯತೆಯೊಂದಿಗೆ ಕ್ರಿಯಾತ್ಮಕ ಕಾರ್ಯಕ್ಕೆ ಕೈಜೋಡಿಸಬೇಕಾಗಿದೆ. ಕರ್ನಾಟಕ ರಾಜ್ಯದಲ್ಲಿ ಅಂದಾಜು 1,100 ಕ್ಕೂ ಅಧಿಕ ರೈತ ಉತ್ಪಾದಕ ಸಂಸ್ಥೆಗಳಿದ್ದು, ಕೃಷಿ ಉತ್ಪನ್ನಗಳ ಮಾರಾಟ ವ್ಯವಸ್ಥೆಯಲ್ಲಿ ಪಾರದರ್ಶಕತೆ ಮತ್ತು ದಕ್ಷತೆ ಹೆಚ್ಚಿಸಿ ಅವುಗಳಿಗೆ ಸ್ಪರ್ಧಾತ್ಮಕ ಬೆಲೆ ಕಲ್ಪಿಸಿ ರೈತ ಸ್ನೇಹಿಯಾಗಿ ಅವರ ಆರ್ಥಿಕ ಮಟ್ಟವನ್ನು ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದೆ.

ರೈತ ಉತ್ಪಾದಕ ಸಂಸ್ಥೆಗಳ ದೂರದೃಷ್ಟಿತ್ವದಿಂದ ಪ್ರಮುಖವಾಗಿ ಅವುಗಳ ಸದಸ್ಯ ರೈತರ ಮುಖೇನ ಸುಸ್ಥಿರವಾದ ಸಮಗ್ರ ಅಭಿವೃದ್ಧಿ ಹೊಂದುವುದರ ಜೊತೆಗೆ ಉತ್ಪಾದಕತೆಯಲ್ಲಿ ಅತೀ ಕಡಿಮೆ ಖರ್ಚಿನೊಂದಿಗೆ ಹೆಚ್ಚಳ, ಸುಸ್ಥಿರ ಸಂಪನ್ಮೂಲಗಳ ಬಳಕೆ ಹಾಗೂ ಅವರ ಉತ್ಪನ್ನಗಳಿಗೆ ಹೆಚ್ಚಿನ ಲಾಭ ತರುವಂತದ್ದಾಗಿದೆ. ಇದನ್ನು ಸಾಮೂಹಿಕ ಪ್ರಕ್ರಿಯೆಯ ಮೂಲಕ ಸಾಧಿಸುವ ಗುರಿಯನ್ನು ಹೊಂದಲಾಗಿದೆ. ಈ ಹಿನ್ನೆಲೆಯಲ್ಲಿ ಒಂದು ವಾರದೊಳಗೆ ಸೂಚಿಸುವ ಸೃಜನಾತ್ಮಕ ಬ್ರಾಂಡ್ ಹೆಸರುಗಳನ್ನು ಶ್ರೀನಿವಾಸ್ (ಪಿಎಫ್‍ಓ ಸಮಾಲೋಚಕರು) ವಾಟ್ಸ್ ಆಫ್ ಸಂಖ್ಯೆ 9980453799 ಹಾಗೂ ಇ-ಮೇಲ್ wdd.fpo2019@gmail.com ಗೆ ಕಳುಹಿಸಿಕೊಡಬೇಕೆಂದು ಜಲಾನಯನ ಅಭಿವೃದ್ಧಿ ಇಲಾಖೆಯ ಆಯುಕ್ತರು ತಿಳಿಸಿದ್ದಾರೆ.

See also  ಮೈಸೂರಿನಲ್ಲಿ ಕೋಟಿಕಂಠ ಗಾಯನಕ್ಕೆ ಅಭೂತಪೂರ್ವ ಸ್ಪಂದನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

177
Lava Kumar

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು