News Kannada
Tuesday, February 07 2023

ಸಾಂಡಲ್ ವುಡ್

ಬೆಂಗಳೂರು: ಕರಕುಶಲ ವಸ್ತುಗಳ ಮಾರಾಟ ಮೇಳಕ್ಕೆ ನಟಿ ಕಾರುಣ್ಯ ರಾಮ್‌ ಚಾಲನೆ

Bengaluru: Actress Karunya Ram inaugurates handicrafts sale fair
Photo Credit : News Kannada

ಬೆಂಗಳೂರು, ಡಿ.16: ಗ್ರ್ಯಾಂಡ್ ಫ್ಲಿಯಾ ಮಾರ್ಕೆಟ್ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ‘ದ ಸೊಕ್ ‘(ಮಾರ್ಕೆಟ್) ಅನ್ನು ಆಯೋಜಿಸಿದೆ. ಡಿಸೆಂಬರ್ 16ರಿಂದ ಡಿಸೆಂಬರ್ 25ರವರೆಗೆ ನಡೆಯಲಿರುವ ಈ ಕರಕುಶಲವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳಕ್ಕೆ ನಟಿ ಕಾರುಣ್ಯ ರಾಮ್, ಗ್ರಿಷ್ಮಾ ಗೌಡ ಚಾಲನೆ ನೀಡಿದರು. ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾದ ಡಾ. ಬಿ.ಎಲ್. ಶಂಕರ್ ಅವರು ಮುಖ್ಯ ಅತಿಥಿಗಳಾಗಿ ಸಭೆಯಲ್ಲಿ ಪಾಲ್ಗೊಂಡರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಟಿ ಕಾರುಣ್ಯ ರಾಮ್ ‘ಸೊಕ್ ಮಾರುಕಟ್ಟೆ ಬಗ್ಗೆ ನಾನು ಬಹಳಷ್ಟು ಕೇಳಿದ್ದೇನೆ. ಅದು ಕ್ರಿಸ್ಮಸ್ ಸಂದರ್ಭದಲ್ಲಿ ಚಿತ್ರಕಲಾ ಪರಿಷತ್ ನಲ್ಲಿ ಈ ಮೇಳವನ್ನು ಆಯೋಜಿಸಿರುವುದು ಬಹಳ ಖುಷಿ ನೀಡಿದೆ. ಇಲ್ಲಿ ಸುಮಾರು ನೂರಕ್ಕೂ ಹೆಚ್ಚಿನ ಮಳಿಗೆಗಳಿವೆ. ಪ್ರತಿಯೊಂದು ವಸ್ತು ಅದ್ಭುತವಾಗಿದೆ ಹಾಗೂ ವಿಭಿನ್ನವಾಗಿದೆ. ಅದರಲ್ಲೂ ನನಗೆ ಮುಖ್ಯವಾಗಿ ಲೈಟ್ ಬಣ್ಣದ ಕಾಟನ್, ಕಲಂಕರಿ, ಆಭರಣಗಳು, ಪೇಂಟಿಂಗ್ ಗಳು ಇಷ್ಟವಾಗುತ್ತವೆ. ಮನೆಯ ಅಲಂಕಾರಕ್ಕೆ ಬೇಕಾದ ಎಲ್ಲಾ ವಸ್ತುಗಳು ಇಲ್ಲಿವೆ. ಮಹಿಳೆಯರು ಹಾಗೂ ಕಲಾವಿದರು ಇಷ್ಟಪಡುವ ಸಾಕಷ್ಟು ವಸ್ತುಗಳಿವೆ. ತಯಾರಿಸಿದವರೇ ನೇರವಾಗಿ ವಸ್ತುಗಳನ್ನು ಮಾರುವುದರಿಂದ ಮಧ್ಯವರ್ತಿಗಳ ಕಾಟವಿಲ್ಲ. ಹಾಗಾಗಿ ದರಗಳು ವಿಪರೀತ ಹೆಚ್ಚಿಲ್ಲ. ಪ್ರತಿಯೊಬ್ಬರೂ ಇಲ್ಲಿಗೆ ಭೇಟಿ ನೀಡಿ ನಿಮಗಿಷ್ಟದ ವಸ್ತುಗಳನ್ನು ಕೊಳ್ಳಿ’ ಎಂದು ನಟಿ ಕಾರುಣ್ಯ ರಾಮ್ ಖುಷಿ ಹಂಚಿಕೊಂಡರು.

ಇನ್ನು ಈ ಮೇಳದ ಕುರಿತು ಮಾತನಾಡಿದ ನಟಿ ಗ್ರಿಷ್ಮಾ ಗೌಡ ‘ಹತ್ತು ದಿನಗಳ ಕಾಲ ನಡೆಯಲಿರುವ ಈ ಮೇಳದಲ್ಲಿ ಎಲ್ಲಾ ಬಣ್ಣಗಳು ಮೇಳೈಯ್ಸಿವೆ. ಗ್ರಾಹಕರಿಗೆ ಇಷ್ಟವಾಗುವ ಹಲವು ವಸ್ತುಗಳು ಇಲ್ಲಿವೆ. ಅದರಲ್ಲೂ ಮಹಿಳೆಯರು ವಿಶೇಷವಾಗಿ ಇಷ್ಟಪಡುವ ಹಲವು ವಿನ್ಯಾಸದ ಬ್ಯಾಗ್ ಗಳು, ಕಾಟನ್ ಸೀರೆಗಳು, ಆಧುನಿಕ ಶೈಲಿಯ ಆಭರಣಗಳು ಈ ಮೇಳದಲ್ಲಿದೆ. ಪ್ರತಿಯೊಬ್ಬರೂ ಬಂದು ಇದರ ಸದುಪಯೋಗ ಪಡೆದುಕೊಳ್ಳಿ’ ಎಂದು ಮನವಿ ಮಾಡಿದರು.

‘ದ ಸೊಕ್’ ಮಾರ್ಕೆಟ್ ಆರ್ಟ್ಸ್ ಆಂಡ್ ಕ್ರಾಫ್ಟ್ ಮೇಳವು ಸಾರ್ವಜನಿಕರಿಗೆ ಸ್ಥಳೀಯ ಕಲಾವಿದರನ್ನು ಬೆಂಬಲಿಸಲು ಹಾಗೂ ವಿಭಿನ್ನ ವಸ್ತುಗಳನ್ನು ಹುಡುಕಲು ಒಂದು ಉತ್ತಮ ಅವಕಾಶವಾಗಿದೆ.10 ದಿನಗಳ ಕಾಲ ನಡೆಯುವ ಈ ಕರಕುಶಲ ವಸ್ತುಗಳ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ ದೇಶದ ನಾನಾ ಕಡೆಯಿಂದ ಬಂದ ಕಲಾವಿದರು ತಮ್ಮ ವಸ್ತುಗಳನ್ನು ಇಲ್ಲಿ ಪ್ರದರ್ಶಿಸುತ್ತಾರೆ. ಅಲಂಕಾರಿಕ ವಸ್ತು, ವೈವಿದ್ಯಮಯ ಉಡುಪು, ಆಭರಣಗಳು ಇಲ್ಲಿ ಲಭ್ಯವಿದೆ. ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿವೆ ನಿಮ್ಮ ಮನೆಯ ಗಾರ್ಡನ್ ಅಲಂಕರಿಸಲು, ನಿಮಗೊಪ್ಪುವ ಉಡುಪು ಹಾಗೂ ಆಭರಣಗಳನ್ನು ಕೊಳ್ಳಲು ಈ ಮೇಳಕ್ಕೆ ತಪ್ಪದೇ ಭೇಟಿ ನೀಡಿ.

See also  ಬೇರೊಬ್ಬರ ಶವ ನೀಡಿದ ಖಾಸಗೀ ಆಸ್ಪತ್ರೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

44
News Kannada

The most exciting, trusted and preferred news websites of Karnataka and Kannadigas around the world.

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು