News Kannada
Monday, December 05 2022

ರಾಮನಗರ

ಇರುಳಿಗರ ಹೋರಾಟಕ್ಕೆ ಬಿಎಸ್‌ಪಿ ಬೆಂಬಲ

Photo Credit : News Kannada

ರಾಮನಗರ: ಕಳೆದ 330 ದಿನಗಳಿಂದ ಅರಣ್ಯ ಹಕ್ಕುಪತ್ರಕ್ಕಾಗಿ ನಡೆಸುತ್ತಿರುವ ಹೋರಾಟಕ್ಕೆ ಇರುಳಿಗರಿಗೆ ಬೆಡ್ ಶೀಟ್ ವಿತರಿಸುವ ಮೂಲಕ ಬಹುಜನ ಸಮಾಜ ಪಾರ್ಟಿಯು ಸಂಪೂರ್ಣ ಬೆಂಬಲ ನೀಡಿದೆ.

ತಾಲೂಕಿನ ಕೈಲಾಂಚ ಹೋಬಳಿ ವ್ಯಾಪ್ತಿಯ ಹಂದಿಗುಂದಿ ಅರಣ್ಯ ಪ್ರದೇಶದಲ್ಲಿ ಇರುಳಿಗರು ಅರಣ್ಯ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ಆಹೋರಾತ್ರಿ ಧರಣಿ ನಡೆಸುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ

ಪಕ್ಷದ ರಾಜ್ಯ ಕಾರ್ಯದರ್ಶಿಯೂ ಆದ ರಾಮನಗರ ಜಿಲ್ಲಾ ಉಸ್ತುವಾರಿ ನಾಗೇಶ್ ಅವರು,  ಉತ್ತರ ಪ್ರದೇಶದ ಮಾಜಿ ಸಿಎಂ ಮಾಯಾವತಿ ಅವರ ಹುಟ್ಟುಹಬ್ಬದ ಪ್ರಯುಕ್ತ ಕೇಕ್ ಕತ್ತರಿಸಿ, ಪ್ರತಿಭಟನಾ ನಿರತರಿಗೆ ಬೆಡ್ ಶೀಟ್ ವಿತರಿಸಿ ಮಾತನಾಡಿ, ಇಡೀ ದೇಶದಲ್ಲಿ ಅಕ್ಕ ಮಾಯಾವತಿ ಅವರು ಹುಟ್ಟು ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡುತ್ತಿದ್ದು ದೀನ ದಲಿತರು, ಹಿಂದುಳಿದ ವರ್ಗದವರು ತುಳಿಕ್ಕೊಳಗಾದವರಿಗೆ ಧೈರ್ಯ ತುಂಬ ಕೆಲಸ ಮಾಡಲಾಗುತ್ತಿದೆ. ಅರಣ್ಯ ಭೂಮಿ ಹಕ್ಕು ಪತ್ರಕ್ಕಾಗಿ ಆಗ್ರಹಿಸಿ ಕಳೆದ 330 ದಿನಗಳಿಂದ ಆಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಇರುಳಿಗ ಸಮುದಾಯಕ್ಕೆ ಬಿಎಸ್‌ಪಿ ಜಿಲ್ಲಾ ಶಾಖೆ ಬೆಂಬಲ ನೀಡಲಾಗುತ್ತಿದೆ ಎಂದರು.

ಇರುಳಿಗರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಿಂದ ಬೆಂಗಳೂರಿನ ವಿಧಾನಸೌಧ ಕೇವಲ 40 ಕಿಲೋ ಮೀಟರ್ ಅಂತರದಲ್ಲಿದೆ. ಅಲ್ಲಿ ಐಎಎಸ್, ಐಪಿಎಸ್ ಅಧಿಕಾರಿಗಳು ಕರ್ತವ್ಯ ನಿರ್ವಹಿಸುತ್ತಿದ್ದರೂ ಇದುವರೆಗೆ ನ್ಯಾಯ ದೊರಕಿಸಿಕೊಡುವ ಕೆಲಸ ಆಗಿಲ್ಲ. ಉತ್ತರ ಪ್ರದೇಶದಲ್ಲಿ ನಾಲ್ಕು ಬಾರಿ ಸಿಎಂ ಆಗಿ ಒಂದು ಬಾರಿ ಸಂಸದರಾಗಿದ್ದ ಮಾಯಾವತಿ ಅವರು, ಒಂದು ಕೋಟಿಗೂ ಹೆಚ್ಚು ನಿವೇಶನ ಹಂಚಿಕೆ ಮಾಡುವ ಕೆಲಸ ಮಾಡಿದ್ದಾರೆ. ಆದರೆ ಬಗರ್ ಹುಕುಂ ಹಾಗೂ ಬರಖಾಸ್ತು ಅಧ್ಯಕ್ಷರಾಗಿರುವ ಇಲ್ಲಿನ ಸ್ಥಳೀಯ ಶಾಸಕರು, ಸಂಸದರು  ವರ್ಷದಿಂದ ಹೋರಾಟ ನಡೆಯುತ್ತಿದ್ದರೂ ಈ ಕಡೆ ಮುಖ ಮಾಡಿಲ್ಲ ಎಂದು ಕಿಡಿಕಾರಿದರು.

ದೇಶದ ಸಂವಿಧಾನವನ್ನು ಯಥವತ್ತಾಗಿ ಜಾರಿಗೆ ತಂದರೇ ಮಾತ್ರ ಎಲ್ಲರಿಗೂ ಸಮಪಾಲು ಹಾಗೂ ಸಮಬಾಳು ದೊರಕಲಿದೆ. ಹೋರಾಟ ನಡೆಸುತ್ತಿರುವ ಕನಿಷ್ಠ ಜೀವನ ನಡೆಸಿಕೊಡಲು ಸರ್ಕಾರಗಳಿಂದ ಸಾಧ್ಯವಾಗಿಲ್ಲ. ಬಡವರಿಗೊಂದು  ಮತ್ತು ಶ್ರೀಮಂತರಿಗೆ ಮತ್ತೊಂದು ಕಾನೂನು ಇದೆಯೇ? ಕೆಳವರ್ಗದವರು ಮಾತ್ರ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂದು ಹರಿಹಾಯ್ದರು.

ಬಿಎಸ್ಪಿ ರಾಜ್ಯ ಕಾಯದರ್ಶಿ ಅನ್ನದಾನಪ್ಪ ಮಾತನಾಡಿ, ಕೊರೆಯುವ ಚಳಿಯಲ್ಲಿಯೂ ಇರುಳಿಗರು ಹೋರಾಟ ಮಾಡುತ್ತಿದ್ದಾರೆ. ಸರ್ಕಾರದ ಆದೇಶವಿದ್ದರು. ಅರಣ್ಯವಾಸಿಗಳಿಗೆ ಹಕ್ಕು ಪತ್ರ ನೀಡಲು ಆಡಳಿತಶಾಹಿ ಮುಂದಾಗುತ್ತಿಲ್ಲ. ಕೈಗಾರಿಕಾ ಪ್ರದೇಶದಲ್ಲಿ ಸಾಗುವಳಿ ಜಮೀನುಗಳಿಗೆ ಶಾಸರಕು ಬೇಗ ಸ್ಪಂದಿಸುತ್ತಾರೆ. ಆದರೆ, ಅರಣ್ಯ ನಿವಾಸಿಗಳಿಗೆ ಮಾತ್ರ ಇದು ತಪ್ಪಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

See also  ಸಾಲ ತೀರಿಸಲು ಗ್ರಾಹಕರ ಚಿನ್ನ ಕ್ಕೆ ಬ್ಯಾಂಕ್ ಮ್ಯಾನೇಜರ್ ಕನ್ನ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

177
Lava Kumar

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು