ರಾಮನಗರ: ಅವರಿಬ್ಬರು ಸ್ನೇಹಿತೆಯರಾಗಿದ್ದರು ಒಂದೇ ಮನೆಯಲ್ಲಿ ವಾಸ ಕೂಡ ಮಾಡುತ್ತಿದ್ದರು. ಈ ಇಬ್ಬರು ಸ್ನೇಹಿತೆಯರ ನಡುವೆ ಒಡವೆ ವಿಚಾರ ಬಂದಿತ್ತು. ಈ ವಿಚಾರವಾಗಿ ಗಲಾಟೆ ನಡೆದು ತನ್ನ ಸ್ನೇಹಿತೆಯ ಕಥೆಯನ್ನ ತನ್ನದೆ ಮನೆಯಲ್ಲಿ ಮುಗಿಸಿದ್ಲು.
ಇತ್ತ ಮೃತ ಮಹಿಳೆಯ ಶವವನ್ನ ಬೈಕ್ ನಲ್ಲಿ ಇಟ್ಟಿಕೊಂಡು ಸಾಗಟ ಮಾಡಲು ಹೋಗಿ ಪೊಲೀಸರ ಅತಿಥಿಯಾಗಿದ್ದಾರೆ ಖದೀಮರು. ರಾಮನಗರದ ಕಾರಾಗೃಹದ ಬಳಿ ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ತಡರಾತ್ರಿ ಅಪಘಾತವಾಗಿತ್ತು. ಬೈಕ್ ನಲ್ಲಿ ಇಬ್ಬರು ಯುವಕರು ಮಹಿಳೆಯ ಶವವನ್ನ ಇಟ್ಟುಕೊಂಡು ಶ್ರೀರಂಗಪಟ್ಟಣದ ಕಡೆ ಹೊರಟಿದ್ದರು. ಆದರೆ ರೋಡ್ ಹಂಪ್ ಬಳಿ ಬೈಕ್ ಅಪಘಾತವಾಗಿ ಬಿದ್ದಿದ್ದರು.
ಘಟನೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ಆ ಮಹಿಳೆ ಮೃತದೇಹ ಅನುಮಾನವಾಗಿ ಕಂಡಿತ್ತು. ತಕ್ಷಣ ಆ ಶವವನ್ನ ರಾಮನಗರದ ಜಿಲ್ಲಾ ಆಸ್ಪತ್ರೆಗೆ ಸಾಗಿಸಿ ವೈದ್ಯರಿಂದ ತಪಾಸಣೆ ಮಾಡಲಾಗಿ ಆ ಯುವತಿ 24 ಗಂಟೆ ಮೊದಲೇ ಸಾವನ್ನಪ್ಪಿರುವುದಾಗಿ ವೈದ್ಯರು ಧೃಡಪಡಿಸಿದ್ರು.
ಗಾಯಗೊಂಡ ಇಬ್ಬರನ್ನ ವಿಚಾರಣೆ ಮಾಡಲಾಗಿ ಅಲ್ಲಿ ಕೊಲೆಯಾಗಿರುವುದು ಶ್ವೇತಾ (22) ಎಂಬುದು ತಿಳಿದಿತ್ತು. ಅಂದಹಾಗೇ ಈ ಶ್ವೇತಾ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮುತ್ತರಾಯನಗರದವಳು. ಈ ಶ್ವೇತಾ ತನ್ನ ಸ್ನೇಹಿತೆ ದುರ್ಗಾ ಮನೆಯಲ್ಲಿ ಕಳೆದ 6 ತಿಂಗಳಿಂದ ವಾಸ ಮಾಡುತ್ತಿದ್ಲು. ಇಬ್ಬರು ಕಲ್ಯಾಣ ಮಂಟಪದಲ್ಲಿ ಕೆಲಸ ಮಾಡುತ್ತಿದ್ರು. ಈ ಶ್ವೇತಾ ದುರ್ಗಾ ಮನೆಯಲ್ಲಿ ಹಣ ಹಾಗೂ ಒಡವೆಗಳನ್ನ ಕಳ್ಳತನ ಮಾಡಿದ್ಲು.
ಈ ವಿಚಾರವಾಗಿ ಸೋಮವಾರ ಮನೆಯಲ್ಲಿ ಗಲಾಟೆ ಮಾಡಿ ದುರ್ಗಾ ಶ್ವೇತಾಗೆ ದೊಣ್ಣೆಯಿಂದ ಹೊಡೆದಿದ್ಲು. ಒಂದು ಕೊಠಡಿಯಲ್ಲಿ ಕೂಡಿ ಹಾಕಿದ್ಲು ಅಂದು ಸಂಜೆ ಕೊಠಡಿ ಬಾಗಿಲು ತಗೆದು ನೋಡಲಾಗಿ ಶ್ವೇತಾ ಮೃತಪಟ್ಟಿದ್ಲು. ತಕ್ಷಣ ದುರ್ಗಾ ತನ್ನ ಪತಿ ರಘು ಹಾಗೂ ಸಹೋದರ ನಾಗರಾಜ್ ಗೆ ಮಾಹಿತಿ ನೀಡಿದ್ಲು ರಘು ತನ್ನ ಸ್ನೇಹಿತರಾದ ಅಭಿ, ವಿನೋದ್ ಅವರನ್ನ ಮನೆಗೆ ಕರೆಸಿ ಮೃತ ದೇಹವನ್ನ ಶ್ರೀರಂಗಪಟ್ಟಣದ ಕಾವೇರಿ ನದಿಗೆ ಎಸೆಯುವ ಪ್ಲಾನ್ ಮಾಡಿದ್ರು.
ಅದ್ರಂತೆ ವಿನೋದ್ ಶ್ವೇತಾ ಶವವನ್ನ ಬೈಕ್ ನಲ್ಲಿ ಕೂರಿಸಿಕೊಂಡು ಹಿಂದೆ ನಾಗರಾಜ್ ಹಿಡಿದುಕೊಂಡು ಹೊರಟಿದ್ರು. ಇತ್ತ ದುರ್ಗಾ ಹಾಗೂ ರಘು ಒಂದು ಬೈಕ್ ನಲ್ಲಿ ಅಭಿ ಒಂದು ಬೈಕ್ ನಲ್ಲಿ ಹೊರಟಿದ್ರು.
ಆದ್ರೆ ಶವ ಇದ್ದ ಬೈಕ್ ಅಪಘಾತವಾಗಿ ಬಿದ್ದು ಕೊಲೆ ರಹಸ್ಯ ಬಯಲಾಗಿದೆ. ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಪ್ರಕರಣವನ್ನ ಆರ್.ಆರ್ ನಗರ ಪೊಲೀಸ್ ಠಾಣೆಗೆ ವರ್ಗಾಹಿಸಲಾಗುತ್ತದೆ ಅಂತಾ ಎಸ್.ಪಿ ತಿಳಿಸಿದ್ರು.
ಒಟ್ಟಾರೆ ಒಡವೆ ವಿಚಾರಕ್ಕೆ ನಡೆದ ಸ್ನೇಹಿತೆಯರ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ. ಮಾಡಿದ ತಪ್ಪಿಗೆ ದುರ್ಗಾ ಸೇರಿದಂತೆ ವಿನೋದ್ ಎಂಬಾತ ಪೊಲೀಸರಿಗೆ ಸಿಕ್ಕಿದ್ದಾರೆ ಅಭಿ ಎಂಬ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಆತನಿಗಾಗಿ ಪೊಲೀಸರು ಬಲೆಬೀಸಿದ್ದಾರೆ.