News Kannada
Wednesday, November 30 2022

ತುಮಕೂರು

ತುಮಕೂರು: ಮಗುವಿನ ಮೃತದೇಹ ಸಾಗಿಸಲು ಹಣವಿಲ್ಲದೆ ಕಣ್ಣೀರಿಟ್ಟ ತಾಯಿ - 1 min read

Tumakuru: Mother in tears as she did not have money to carry child's body
Photo Credit : Pexels

ತುಮಕೂರು:  ಮಗುವಿನ ಮೃತದೇಹ ಸಾಗಿಸಲು ಹಣವಿಲ್ಲದೆ ಬಾಣಂತಿ ಮತ್ತು ಪೋಷಕರು ಕಣ್ಣೀರಿಟ್ಟ ಘಟನೆ ತುಮಕೂರು ಬಸ್ ನಿಲ್ದಾಣದಲ್ಲಿ ನಡೆದಿದೆ.

ನಾಲ್ಕು ದಿನದ ಹಿಂದೆ ದಾವಣಗೆರೆ ಮೂಲದ ಗೌರಮ್ಮ ಜಿಲ್ಲಾಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದು, ಇವತ್ತು ಮುಂಜಾನೆ 4 ಗಂಟೆ ಸುಮಾರಿಗೆ ಮಗು ಅಸು ನೀಗಿದೆ. ಮೃತದೇಹ ತೆಗೆದುಕೊಂಡು ಹೋಗುವಂತೆ ವೈದ್ಯರು ಹೇಳಿದ್ದಾರೆ. 40 ಕಿಲೋಮೀಟರ್ ಮಾತ್ರ ಆಂಬುಲೆನ್ಸ್ ನಲ್ಲಿ ಸಾಗಿಸುವುದಾಗಿ 108 ಆಂಬುಲೆನ್ಸ್ ಸಿಬ್ಬಂದಿ ತಿಳಿಸಿದ್ದಾರೆ.

ದಾವಣಗೆರೆಗೆ ಹೋಗಲು ಪೋಷಕರು ಮಗುವಿನ ಶವದೊಂದಿಗೆ ಬಂದಿದ್ದು, ಸರ್ಕಾರಿ ಬಸ್ ನಲ್ಲಿ ಮೃತದೇಹ ಸಾಗಿಸಲು ಸಿಬ್ಬಂದಿ ಒಪ್ಪಿರಲಿಲ್ಲ. ಇದರಿಂದ ಕಂಗಾಲಾದ ಕುಟುಂಬದವರು ಮೃತದೇಹ ಇಟ್ಟುಕೊಂಡು ಬಸ್ ನಿಲ್ದಾಣದಲ್ಲಿ ಕಣ್ಣೀರಿಟ್ಟಿದ್ದಾರೆ. ಕೊನೆಗೆ ಮಾಹಿತಿ ತಿಳಿದ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ವೀಣಾ ಅವರು ವಾಹನ ವ್ಯವಸ್ಥೆ ಮಾಡಿ ದಾವಣಗೆರೆಗೆ ಕಳಿಸಿದ್ದಾರೆ ಎನ್ನಲಾಗಿದೆ.

See also  ಫೋನ್ ಪೇ ಮೂಲಕ ಲಂಚ ಪಡೆದ ಆರೋಪದಡಿ ಪಿಎಸ್ ಐ ಓರ್ವ ಅಮಾನತು : ತುಮಕೂರು
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

12790
NewsKannada

Read More Articles

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು