ಬಳ್ಳಾರಿ: ಬಳ್ಳಾರಿಯಲ್ಲಿ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಪತಿ-ಪತ್ನಿ-ಮಗು ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ ಬುಧವಾರ ನಡೆದಿದೆ.
ವೀರೇಶ, ಇವರ ಪತ್ನಿ ಅಂಜಲಿ ಮತ್ತು ಮಗ ದಿನೇಶ್ ಮೃತ ದುರ್ದೈವಿಗಳು. ಅಂಜಲಿ ಬಿ.ಎಡ್ ಓದುತ್ತಿದ್ದರು. ಇಂದು ಪರೀಕ್ಷೆ ಇತ್ತು. ಹಾಗಾಗಿ ಪತ್ನಿಯನ್ನು ಪರೀಕ್ಷಾ ಕೇಂದ್ರಕ್ಕೆ ಬೈಕ್ನಲ್ಲಿ ಇಬ್ಬರು ಮಕ್ಕಳೊಂದಿಗೆ ವೀರೇಶ್ ಕರೆದೊಯ್ಯುತ್ತಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ
ಮಾರ್ಗಮಧ್ಯೆ ಯಮನಂತೆ ಬಂದ ಲಾರಿ ಹಿಂಬದಿಯಿಂದ ಬೈಕ್ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗಂಡ- ಹೆಂಡತಿ-ಮಗ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಹನಿ ಎಂಬ ಹೆಣ್ಣು ಮಗುವಿಗೆ ಸ್ಥಿತಿ ಗಂಭೀರವಾಗಿದೆ. ಬಳ್ಳಾರಿ ಟ್ರಾಮ ಕೇರ್ ಸೆಂಟರ್ಗೆ ಹನಿಯನ್ನು ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ. ವಿಮ್ಸ್ ಆಸ್ಪತ್ರೆಯ ಶವಾಗಾರಕ್ಕೆ ಮೂವರ ಶವಗಳನ್ನು ರವಾನಿಸಲಾಗಿದೆ.
ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.