News Kannada
Monday, January 30 2023

ಬೀದರ್

ಬೀದರ್: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯಲ್ಲಿ ನ್ಯಾಯ ಬೆಲೆ ಅಂಗಡಿಯಲ್ಲಿ 5ಕೆ.ಜಿ ಅಕ್ಕಿ ವಿತರಣೆ

Photo Credit : News Kannada

ಬೀದರ್: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿಯ ಅಕ್ಕಿಯನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರದ ಅನುದಾನದಡಿ ಖರೀದಿಸಿ ವಿತರಿಸಲಾಗುತ್ತಿದೆ.

ಜನವರಿ-2023 ಮಾಹೆಯಲ್ಲಿ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಅಂತ್ಯೋದಯ (AAY) ಪಡಿತರ ಚೀಟಿದಾರರಿಗೆ 35 ಕೆಜಿ ಹಾಗೂ ಆದ್ಯತಾ(PHH) ಪಡಿತರ ಚೀಟಿಯ ಪ್ರತಿ ಸದಸ್ಯರಿಗೆ 5 ಕೆ.ಜಿ.ಯಂತೆ ಉಚಿತವಾಗಿ ವಿತರಿಸಲಾಗುವುದು.

ಜನವರಿ-2023ರ ಮಾಹೆಗೆ ರಾಜ್ಯ ಸರ್ಕಾರದಿಂದ ಹೆಚ್ಚುವಾರಿವಾಗಿ 01 ಕೆ.ಜಿ ಅಕ್ಕಿಯನ್ನು ನೀಡಲು ನಿರ್ಧರಿಸಲಾಗಿರುತ್ತದೆ. ಆನವರಿ-2023ರ ನೀಡಬೇಕ್ಕಾದ 01ಕೆ.ಜಿ ಅಕ್ಕಿಯನ್ನು ಫೆಬ್ರುವರಿ-2023ರ ಮಾಹೆಯಲ್ಲಿ ಸೇರಿಸಿ ಅಕ್ಕಿಯನ್ನು ಪಡಿತರ ವಿತರಣೆ ಮಾಡಲಾಗುವುದು.

ಆದ್ಯತೇತರ (ಎಪಿಎಲ್) ಪಡಿತರ ಚೀಟಿಯ ಏಕ ಸದಸ್ಯ ಪಡಿತರ ಚೀಟಿಗೆ 5 ಕೆ.ಜಿ. ಅಕ್ಕಿ ಹಾಗೂ ಎರಡು ಮತ್ತು ಹೆಚ್ಚಿನ ಸದಸ್ಯರಿರುವ ಪಡಿತರ ಚೀಟಿಗೆ 10ಕೆ.ಜಿ. ಅಕ್ಕಿ, ಪ್ರತಿ ಕೆ.ಜಿ.ಗೆ 15ರೂ. ದಂತೆ ವಿತರಣೆ ಮಾಡಲಾಗುವುದು.

ಅಂತರಾಜ್ಯ ಪೋರ್ಟೆಬಲಿಟಿ ಮೂಲಕ ಪಡಿತರ ಪಡೆಯುವ ಕೇಂದ್ರ ಸರ್ಕಾರದ ಪಡಿತರ ವಿತರಣಾ ಪ್ರಮಾಣ 5 ಕೆ.ಜಿ.ಅಕ್ಕಿ ಪ್ರತಿ ಸದಸ್ಯರಿಗೆ ರಾಜ್ಯ ಯಾವುದೇ ನ್ಯಾಯ ಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

See also  ಬೀದರ್: ಜಿಲ್ಲಾ ಪಂಚಾಯಿತಿ ಎದುರು ಕರವೇ ಪ್ರತಿಭಟನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12792
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು