ಔರಾದ: ಔರಾದ ಕ್ಷೇತ್ರದ ಜನತೆಗೆ ಪ್ರಭು ಚೌಹಾಣ್ ಬಹಳ ಅನ್ಯಾಯ, ಮೋಸ ಮಾಡಿದ್ದಾರೆ. ಯಾವುದೇ ಪ್ರಗತಿಪರ ಕೆಲಸ ಮಾಡಿಲ್ಲ ಆದ್ದರಿಂದ ಪ್ರಭು ಚೌಹಾಣ್ ಮುಕ್ತ ಔರಾದ ಮಾಡೋದು ನನ್ನ ಸಂಕಲ್ಪವಾಗಿದೆ ಎಂದು ಏಕತಾ ಫೌಂಡೇಶನ್ ಅಧ್ಯಕ್ಷ ರವೀಂದ್ರ ಸ್ವಾಮಿ ಹೇಳಿದರು.
ಪಟ್ಟಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಮ್ಮ ಸಮಾಜದವರಿಗೆ ಮಾತ್ರ ಅಭಿವೃದ್ಧಿ ಮಾಡುತ್ತಿದ್ದಾರೆ ಹೊರತು ಅನ್ಯ ಸಮಾಜದವರಿಗೆ ಕಡೆಗಣಿಸುತ್ತಿದ್ದಾರೆ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ಸರ್ಕಾರಿ ಕಾರ್ಯಕ್ರಮದಲ್ಲಿ ತಮ್ಮ ಸ್ಥಾನದಲ್ಲಿ ತಮ್ಮ ಮಗನನ್ನು ಕಳಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನೆ ಮಾಡಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಗೆದಿಲಿ ಬಿಡ್ಲಿ ಆದರೆ ಪ್ರಭು ಚೌಹಾಣ್ ಅವರನ್ನು ಪುನಹ ಮುಂಬೈಗೆ ಕಳಿಸುವುದು ಪಕ್ಕ ಎಂದು ಗುಡುಗಿದರು.
ಈ ಈ ಸಂದರ್ಭದಲ್ಲಿ ಗೋರ್ ಸೇನಾರಾಜ್ಯಾಧ್ಯಕ್ಷ ಬಾಲು ರಾಠೋಡ್, ಕುಮಾರ್ ದೇಹಮುಖ್, ಪ್ರವೀಣ್ ಸೇರಿದಂತೆ ಇತರರು ಹಾಜರಿದ್ದರು.