News Kannada
Thursday, March 30 2023

ಬೀದರ್

ಕುಕ್ಕರ್ ವಿತರಣೆ ಲೋಕಾಯುಕ್ತ ತನಿಖೆ ಮಾಡಬೇಕು ಎಂದು ಒತ್ತಾಯಿಸಿದ : ಸಿ.ಎಂ.ಫೈಜ್‌

Lokayukta demands Lokayukta probe into cooker distribution: CM Faiz
Photo Credit :

ಹುಮನಾಬಾದ : ಚುನಾವಣೆ ದೃಷ್ಟಿಯಲ್ಲಿಟ್ಟು ಕೊಂಡು ಕ್ಷೇತ್ರದ ಶಾಸಕ ರಾಜಶೇಖರ ಪಾಟೀಲ ಅವರು ಮಹಿಳೆಯರಿಗೆ ಕುಕ್ಕರ್ ಆಮಿಷ ತೋರಿಸಿ ಮತ ಎಳೆಯುವ ತಂತ್ರಗಾರಿಕೆ ಮಾಡಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ಸಿ.ಎಂ.ಫೈಜ್‌ ಆರೋಪಿ‌ಸಿದರು.

ಮಾರ್ಚ್ 5 ರಂದು ಶಾಸಕರ ಸುಪುತ್ರನ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಗಿಫ್ಟ್ ಕೊಡುವಂತ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು ಹಾಗೂ ಪುರುಷರು ಸೇರಿಕೊಂಡಿದ್ದರು. ಪಟ್ಟಣದ ಹೊರವಲಯದ ರಾಜರಾಜೇಶ್ವರಿ ಮೈದಾನದಲ್ಲಿ.

ಇದೇ ವೇಳೆ ಗಿಫ್ಟ್​ಗಾಗಿ ನೂಕುನುಗ್ಗಲು ಉಂಟಾಗಿ ಇಬ್ಬರು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ. ಕಾರ್ಯಕ್ರಮ ಆಯೋಜನೆ ಮಾಡಲು ಅನುಮತಿ ಪಡೆಯಲಾಗಿದೆಯೇ ? ಮಹಿಳೆಯರ ಸುರಕ್ಷೆಗೆ ಯಾವ ಕ್ರಮ ಕೈಗೊಳ್ಳಲಾಗಿತ್ತು .?ಅವು ಐಎಸ್‌ಐ ಮಾರ್ಕ್ ಇರುವ ಕುಕ್ಕರ್ ಇವೆಯಾ ? ಯಾವ ಕಂಪನಿಯದು ? ಎಂದು ಕೇಳಲು ಬಯಸುತ್ತೇನೆ . ಎಂದರು .

ಇಬ್ಬರು ಮಹಿಳೆಯರಿಗೆ ಗಾಯವಾಗಿದ್ದು ಅವರ ಆಸ್ಪತ್ರೆಯ ಖರ್ಚುಗಳು ಯಾರು ನೀಡುವರು ಎಂದು ಪ್ರಶ್ನಿಸಿದ ಅವರು ಜನರ ಮೇಲೆ ಅಷ್ಟು ಪ್ರೀತಿಯ ಇದ್ದರೆ ಅವರ ಮನೆಗೆ ಕುಕ್ಕರ್ ತಲುಪಿಸಬೇಕಾಗಿತ್ತು. ಶಾಸಕರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಡಿಸಿಸಿ ಬ್ಯಾಂಕಿಂದ 1 ಲಕ್ಷ ಸಾಲ ಮನ್ನಾ ಮಾಡಿಸಲಿ ಎಂದು ಹೇಳಿದರು .

ಒಟ್ಟಾರೆಯಾಗಿ ಹಂಚಲು ಎಂಬುದು ತನಿಖೆ ಆಗಲೇಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮುಖಂಡರಾದ ಎ.ಎಮ್. ಕುಲಕರ್ಣಿ, ಶಿವರಾಜ ಹುಲಿ, ಬಾಬು ಬುಕಾರಿ, ಶಿವಪುತ್ರ ಮಾಳಿಗೆ ಇದ್ದರು.

See also  ಬೀದರ್: ಘಾಟಬೋರಾಳದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಸಗಣಿ ಎಸೆದ ಅಪರಿಚಿತ ದುಷ್ಕರ್ಮಿಗಳು!
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

Subscribe Newsletter

Get latest news karnataka updates on your email.

[mc4wp_form id="118196"]

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು