ಬೀದರ್ : ಇತ್ತೀಚಿನ ದಿನಗಳಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ವಿವಿಧ ಕಳ್ಳತನದಲ್ಲಿ ಭಾಗಿಯಾದ್ದ ಕಳ್ಳರ ಹೆಡೆಮುರಿ ಕಟ್ಟಲು ಬೀದರ್ ಜಿಲ್ಲೆಯ ಚಿಟಗುಪ್ಪಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು,ಬಂಧಿತರಿಂದ 16 ಲಕ್ಷ ಮೌಲ್ಯದ ಬೈಕ್, ದವಸ ಧಾನ್ಯ ವಶಕ್ಕೆ ಪಡೆಯಲಾಗಿದೆ.
ಬೀದರ್ ಜಿಲ್ಲೆಯಾದ್ಯಂತ ಖತರ್ನಾಕ್ ಖದೀಮರು ಕಳ್ಳತನ ಮಾಡಿದ್ದ ವಿವಿಧ ಕಂಪನಿಯ 18 ಮೋಟಾರ್ ಸೈಕಲ್, 350 ಕೆಜಿ ಸೋಯಾಬಿನ್, 250 ಕೆಜಿ ಅಲಸಂದಿ, 840 ಕೆಜಿ ತೊಗರಿ ಸೇರಿ ಒಟ್ಟು 16.93 ಲಕ್ಷ ರೂ. ಮೌಲ್ಯದ ಬೈಕ್ ಹಾಗೂ ದವಸಧಾನ್ಯ ವಶಕ್ಕೆ ಪಡೆಯಲಾಗಿದೆ.
ಅಷ್ಟೇ ಅಲ್ಲದೇ 7, ತೆಲಂಗಾಣ ರಾಜ್ಯದ ಜಹೀರಾಬಾದ್ನಲ್ಲಿ ಮೂರು, ಕಲ್ಬುರ್ಗಿ ಜಿಲ್ಲೆಯ ಚಿಂಚೋಳ್ಳಿಯ ಕೂಡ್ಲಿಯಲ್ಲಿ 2 ಹಾಗೂ ಬಸವಕಲ್ಯಾಣ ತಾಲೂಕಿನ ಹಂದ್ರಾಳ ಗ್ರಾಮದಲ್ಲಿ 1 ಪ್ರಕರಣ ಸೇರಿ ಒಟ್ಟು 13 ಪ್ರಕರಣಗಳಲ್ಲಿ ಕಳವಾದ ಬೈಕ್, ದವಸಧಾನ್ಯವನ್ನ ಬಂಧಿತರಿಂದ ವಶಕ್ಕೆ ಪಡೆಯಲಾಗಿದೆ.