News Kannada
Tuesday, January 31 2023

ಕಲಬುರಗಿ

ದರೋಡೆಕೋರರಿಂದ 1.68 ಕೆಜಿ ಚಿನ್ನ ವಶಪಡಿಸಿಕೊಂಡ ಪೊಲೀಸರು

Photo Credit :

ಕಲಬುರಗಿ : ಪೊಲೀಸರು, ಕಳ್ಳರನ್ನು ಬಂಧಿಸಿದ್ದಾರೆ ಎಂದರೆ, ಎರಡ್ಮೂರು ಮನೆಗಳಲ್ಲಿ ಕಳ್ಳತನದ ವಸ್ತುಗಳೋ ಅಥವಾ ನೂರಾರು ಗ್ರಾಂಗಳಷ್ಟು ಚಿನ್ನ ಸಿಕ್ಕಿರಬಹುದು ಎಂದೇ ಎಲ್ಲರೂ ಭಾವಿಸಿರುತ್ತಾರೆ. ಆದರೆ, ಇಲ್ಲಿ ಕೆಜಿಗಟ್ಟಲೇ ಬಂಗಾರ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯ ಪೊಲೀಸರು ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ 8 ಜನರನ್ನು ಬಂಧಿಸಿದ್ದರು. ಬಂಧಿತರ ಬಳಿ ಇದ್ದ ಚಿನ್ನ ನೋಡಿ ಪೊಲೀಸರೇ ಅವಾಕ್ಕಾಗಿದ್ದಾರೆ. ದರೋಡೆಕೋರರಿಂದ ಪೊಲೀಸರು ಬರೋಬ್ಬರಿ 1.68 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ. ಈ ಆರೋಪಿಗಳು ಚಿನ್ನದ ವ್ಯಾಪಾರಿಯನ್ನೇ ಟಾರ್ಗೆಟ್ ಮಾಡಿದ್ದರು ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಉಪ ಪೊಲೀಸ್ ಆಯುಕ್ತ ಎ. ಶ್ರೀನಿವಾಸುಲು, ಇತ್ತೀಚೆಗೆ ಚಿನ್ನದ ವ್ಯಾಪಾರಿಯ ಕೆಲಸಗಾರನ ಬಳಿಯಿದ್ದ ಚಿನ್ನ ಕಳ್ಳತನವಾಗಿತ್ತು ಎಂಬ ಕುರಿತು ದೂರು ದಾಖಲಾಗಿತ್ತು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಂಟು ಆರೋಪಿಗಳನ್ನು ಬಂಧಿಸಿದ್ದೇವೆ ಮತ್ತು ಅವರಿಂದ 1.68 ಕೆಜಿ ಚಿನ್ನ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಇವರಿಂದ ಇನ್ನೂ ದರೋಡೆಗಳು ನಡೆದಿವೆಯೇ ? ಎಂಬ ಕುರಿತು ತನಿಖೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

See also  ಪಿಎಸ್ಐ ನೇಮಕಾತಿ ಅಕ್ರಮ ಪ್ರಕರಣ: ಹಣ ಪಡೆದ ಬಗ್ಗೆ ಒಪ್ಪಿಕೊಂಡ ದಿವ್ಯಾ ಹಾಗರಗಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

12790
NewsKannada

Read More Articles
Editor's Pick

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು