ಕೊಪ್ಪಳ : ಕೊಪ್ಪಳದ ವೀರಣ್ಣ ಅವರು ಅಖಿಲ ಭಾರತ ಲಿಂಗಾಯತ್ ಮಹಾಸಭಾದ ರಾಜ್ಯಾಧ್ಯಕ್ಷರಾಗಿದ್ದು, ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ಮೊಟ್ಟೆ ನೀಡುತ್ತಾರೆ ಎಂಬ ಕಾರಣಕ್ಕೆ ಮಗನ ಟಿಸಿ ಪಡೆದು ಖಾಸಗಿ ಶಾಲೆಗೆ ಸೇರಿಸಿದ್ದಾರೆ.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಮೊಟ್ಟೆ ನೀಡುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಯಿಂದ ತಂದೆಯೊಬ್ಬರು ತನ್ನ ಮಗನ ಟಿಸಿಯನ್ನು ಹಿಂಪಡೆದಿರುವ ಘಟನೆ ನಡೆದಿದೆ.
ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು, ಕನ್ನಡಾಂಬೆಯ ಅಪಾರ ಅಭಿಮಾನದಿಂದ ಒಂದನೇ ತರಗತಿಗೆ ಸರಕಾರಿ ಕನ್ನಡ ಮಾದ್ಯಮದಲ್ಲಿ ಸೇರಿಸಿದ್ದ ನನ್ನ ಏಕೈಕ ಮಗನನ್ನು ದಿ.14.12.2021 ಮಂಗಳವಾರ ಸರಕಾರದ ಆದೇಶ ‘ ಶಾಲೆಯಲ್ಲಿ ಮೊಟ್ಟೆ ಕೊಡುವ ಕ್ರಮವನ್ನು ‘ ದಿಕ್ಕರಿಸಿ ವರ್ಗಾವಣೆ ಪತ್ರವನ್ನು (T.C) ಪಡೆದು ಹೊರಬಂದೆ.
ಸರಕಾರ ನಡೆಸುವ ಶಾಲೆಗಳು ನನಗೆ ತುಂಬಾ ಅಭಿಮಾನವನ್ನು ಸರಕಾರದ ಬಗ್ಗೆ ತಂದಿತ್ತು.ಸರಕಾರ ವಿದ್ಯಾರ್ಥಿಗಳಿಗೆ ಕೊಡುವ ಸೌಲಭ್ಯಗಳನ್ನು ನೋಡಿ ಸರಕಾರದ ಬಗ್ಗೆ ತುಂಬಾನೆ ಗೌರವ ಭಾವನೆಯನ್ನು ನಾನು ಹೊಂದಿದ್ದೆ. ಆದರೆ ಆಹಾರ ಪದ್ದತಿಯಲ್ಲಿ ಸರಕಾರ ಎಡವಿದೆ. ಈ ರೀತಿ ಏನೂ ತಿಳಿಯದ ಮಕ್ಕಳಿಗೆ ಮೊಟ್ಟೆ ಕೊಡುವುದರ ಮೂಲಕ ಸರಕಾರ ತಪ್ಪು ಹೆಜ್ಜೆ ಇಟ್ಟಿದೆ. ಈ ಕ್ರಮವನ್ನು ವಿರೋಧಿಸುವ ಸಂಕೇತಕ್ಕೆ ನಾನೇ ನನ್ನ ಮಗನನ್ನು TC ಪಡೆಯುವುದರ ಮೂಲಕ ಸರಕಾರದ ಮೊಟ್ಟೆ ಕೊಡುವ ಆಹಾರ ಕೊಡುವಲ್ಲಿ ಅನುಸರಿಸುವ ಈ ವ್ಯವಸ್ಥೆಯನ್ನು ಲಿಂಗಾಯತ ಧರ್ಮಿಯನಾಗಿ ವಿರೋಧಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.