News Kannada
Saturday, November 26 2022

ಕೊಪ್ಪಳ

ಕೊಪ್ಪಳ: ತಂದೆಯ ಸಾಲ ತೀರಿಸಲು ಬೆತ್ತಲೆ ಪೂಜೆ ಮಾಡಿದ ಬಾಲಕ - 1 min read

K'taka man booked for 'purifying' water tank after Dalit woman drinks water
Photo Credit : IANS

ಕೊಪ್ಪಳ,ಅ.3: 16 ವರ್ಷದ ಬಾಲಕನಿಗೆ ಬಟ್ಟೆಯಿಲ್ಲದೆ ಪೂಜೆ ಸಲ್ಲಿಸುವಂತೆ ಒತ್ತಾಯಿಸಿದ ಆರೋಪದ ಮೇಲೆ ಮೂವರು ವ್ಯಕ್ತಿಗಳ ವಿರುದ್ಧ ಕರ್ನಾಟಕ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಆರೋಪಿಗಳು ಈ ಕೃತ್ಯದ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದು, ಇದು ವೈರಲ್ ಆಗಿದೆ ಎಂದು ಆರೋಪಿಸಲಾಗಿದೆ.

ಕೊಪ್ಪಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಪೊಲೀಸರ ಪ್ರಕಾರ, ಮೂವರು ಆರೋಪಿಗಳು ದೇವರಿಗೆ ಬೆತ್ತಲೆ ಪೂಜೆ ಸಲ್ಲಿಸಿದರೆ, ತಂದೆಯ ಸಾಲ ತೀರಿಸಲಾಗುವುದು ಎಂದು ಬಾಲಕನಿಗೆ ನಂಬಿಸಿದ್ದರು.

ಬಾಲಕನನ್ನು ಹುಬ್ಬಳ್ಳಿ ನಗರದ ಲಾಡ್ಜ್ ಗೆ ಕರೆದೊಯ್ದು ಬೆತ್ತಲೆ ಸ್ಥಿತಿಯಲ್ಲಿ ದೇವರಿಗೆ ಪೂಜೆ ಸಲ್ಲಿಸುವಂತೆ ಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಶರಣಪ್ಪ, ವಿರುಪಣ್ಣಗೌಡ ಮತ್ತು ಶರಣಪ್ಪ ತಳವಾರ ಬಂಧಿತ ಆರೋಪಿಗಳು.  ವೀಡಿಯೊಗಳು ಹರಿದಾಡುತ್ತಿರುವ ಬಗ್ಗೆ ತಿಳಿದ ನಂತರ, ಬಾಲಕ ತನಗೆ ಏನಾಯಿತು ಎಂಬುದರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದನು. ತದನಂತರ, ಪೋಷಕರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದರು. ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

See also  ಕೊಪ್ಪಳ: ಮಚ್ಚಿನಿಂದ ಮೂವರ ಮೇಲೆ ದಾಳಿ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

30409

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು