News Kannada
Thursday, July 07 2022

ಕರಾವಳಿ

ಬಾವಿಯಲ್ಲಿ ನವವಿವಾಹಿತೆ ಮೃತದೇಹ ಪತ್ತೆ - 1 min read

Photo Credit :

ಬಾವಿಯಲ್ಲಿ ನವವಿವಾಹಿತೆ ಮೃತದೇಹ ಪತ್ತೆ

 ಕಾಸರಗೋಡು: ನವವಿವಾಹಿತೆಯ ಮೃತದೇಹ ಬಾವಿಯಲ್ಲಿ ಪತ್ತೆಯಾದ ಘಟನೆ ಬೇಕಲ ಠಾಣಾ ವ್ಯಾಪ್ತಿಯ ಉದುಮದಲ್ಲಿ ನಡೆದಿದೆ.

ಉದುಮ ಮುಕ್ಕುನ್ನತ್ ನ  ಬಿಜು ಎಂಬವರ ಪತ್ನಿ  ಶ್ರೀಲತಾ ( 26) ಮೃತಪಟ್ಟವಳು.  ಪತಿ ಬಿಜು ಗಲ್ಫ್ ಉದ್ಯೋಗಿಯಾಗಿದ್ದು,  ಕಾಸರಗೋಡು ನೆಲ್ಲಿಕುಂಜೆ ನಿವಾಸಿಯಾಗಿದ್ದ ಶೀಕಲಾರವರ ವಿವಾಹ ಹತ್ತು ತಿಂಗಳ ಹಿಂದೆಯಷ್ಟೇ ನಡೆದಿತ್ತು. ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಶ್ರೀಕಲಾರಿಗಾಗಿ ಮನೆಯವರು ಶೋಧ ನಡೆಸಿದ್ದು , ಈ ನಡುವೆ ಮನೆ ಪಕ್ಕದ ಖಾಸಗಿ ವ್ಯಕ್ತಿಯೋರ್ವರ ಬಾವಿಯಲ್ಲಿ ಪತ್ತೆಯಾಗಿದೆ. ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಕಾಸರಗೋಡು ಅಗ್ನಿಶಾಮಕ ದಳ ಮತ್ತು ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತಿ ಮಹಜರು ನಡೆಸಿದ್ದು  ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ನೆಲ್ಲಿಕುಂಜೆ ಕುಂಡುವಳಪ್ಪಿನ ಅಚ್ಯತನ್ – ಜಾನಕಿ ದಂಪತಿ ಪುತ್ರಿಯಾಗಿದ್ದ ಶ್ರೀಕಲಾರ ವಿವಾಹ 2015 ರ ಜನವರಿ 21ರಂದು ನಡೆದಿತ್ತು. ವಿವಾಹದ ಬಳಿಕ ಪತಿ ಬಿಜು ಗಲ್ಫ್ ಗೆ ತೆರಳಿದ್ದರು. ಶ್ರೀಕಲಾ ನವಂಬರ್ ಎರಡರಂದು ಸ್ಥಳೀಯ ಸಂಸ್ಥೆ ಚುನಾವಣೆಗೆ ಮತ ಚಲಾಯಿಸಲು ತಾಯಿ ಮನೆಗೆ ಬಂದು ಬಳಿಕ ಪತಿ ಮನೆಗೆ ತೆರಳಿದ್ದರು. ಸಾವಿನ ಬಗ್ಗೆ ಸಂಶಯಗಳು ಉಂಟಾಗಿದ್ದು, ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ನಡೆಸುತ್ತಿದ್ದಾರೆ.

See also  ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಧಿಕ ಅಂಕ: ಸೂರಿಕುಮೇರು ಚರ್ಚ್ ನಿಂದ ಅಭಿನಂದನೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು