News Kannada

ಕರಾವಳಿ

ಹಿಂದುಗಳ ಪಾಲಿಗೆ ಸರಕಾರ ಸತ್ತಿದೆ: ಶಾಸಕ ವಿ.ಸುನೀಲ್ ಕುಮಾರ್ - 1 min read

ಹಿಂದುಗಳ ಪಾಲಿಗೆ ಸರಕಾರ ಸತ್ತಿದೆ: ಶಾಸಕ ವಿ.ಸುನೀಲ್ ಕುಮಾರ್

ಕಾರ್ಕಳ: ಕಳೆದ ಎರಡುವರೆ ವರ್ಷದಲ್ಲಿನ ಸರಕಾರದ ನಡೆ ಗಮನಿಸಿದಾಗ ಹಾಗೂ ಮಡಿಕೇರಿ ಘಟನೆ, ಮೂಡಬಿದ್ರೆ ಘಟನೆಗಳನ್ನು ಅವಲೋಕಿಸಿದಾಗ ಸರಕಾರ ಹಿಂದುಗಳ ಪಾಲಿಗೆ ಸತ್ತು ಹೋಗಿದೆ. ಮಡಿಕೇರಿಯಲ್ಲಿ ಪೂರ್ವಯೋಜಿತ ಕೃತ್ಯ ನಡೆದಿದೆ. ಹೊರರಾಜ್ಯದವರು ಬಂದು ಮೆರವಣಿಗೆ ನಡೆಸಿ ರಾಜ್ಯದ ಜನರನ್ನು ಹತ್ಯೆ ಮಾಡಿ ಹಿಂತಿರುಗಿದಾಗ ಸರಕಾರ ಕೈ ಕಟ್ಟಿ ಕೂತಿದೆ.

ಕುಟ್ಟಪ್ಪ ಹತ್ಯೆ ಸಾರ್ವಜನಿಕವಾಗಿ ನಡೆದಿದ್ದರೂ ಮುಖ್ಯ ಮಂತ್ರಿಗಳು ಆಕಸ್ಮಿಕ ಘಟನೆ ಎಂದಿರುವುದು ಆಶ್ಚರ್ಯಕರ. ಆಂಜನೇಯರ ಭ್ರಷ್ಟಾಚಾರದ ಹಗರಣ ಮಾಧ್ಯಮಗಳಲ್ಲಿ ಬಂದಾಗ ವರದಿ ತರಿಸುತ್ತೇನೆ ಎನ್ನುವ ಮುಖ್ಯ ಮಂತ್ರಿಗಳು ಕುಟ್ಟಪ್ಪರ ಹತ್ಯೆ ಘಟನೆಯಲ್ಲಿ ಮರಣೋತ್ತರ ಪರೀಕ್ಷೆಯ ವರದಿ ಬರುವ ಮೊದಲೇ ಮಾಧ್ಯಮಗಳಿಗೆ ನೀಡಿರುವ ಈ ಹೇಳಿಕೆಯು ದುಷ್ಕಮರ್ಿಗಳಿಗೆ ನೇರ ಬೆಂಬಲ ನೀಡಿದಂತಾಗಿದೆ.

ಬಿ.ಜೆ.ಪಿ, ಬಜರಂಗದಳದ ಮೇಲೆ ದಾಳಿಗೆ ಸಿದ್ದರಾಗಿ ಎಂದು ಬೆಂಗಳೂರಿನ ಯುವ ಕಾಂಗ್ರೆಸ್ ಸಭೆಯಲ್ಲಿ ಮುಖ್ಯಮಂತ್ರಿ ಭಾಷಣ ಮಾಡಿದ ಒಂದು ವಾರದೊಳಗೆ ಈ ರೀತಿಯ ಕೃತ್ಯದ ಘಟನೆ ನಡೆದಿರುವುದು ಸರಕಾರದ ಪ್ರಯೋಜಕತ್ವದಲ್ಲೇ ಎಂಬುದಕ್ಕೆ ಅನುಮಾನವಿಲ್ಲ.

ಒಬ್ಬ ವ್ಯಕ್ತಿಯನ್ನು ಸಾರ್ವಜನಿಕವಾಗಿ ಕಲ್ಲಿನಲ್ಲಿ ಗುದ್ದಿ ಕೊಂದಾಗ ಸಾಹಿತಿಗಳು ಬಾಯಿ ಬಿಟ್ಟಿಲ್ಲ, ಈಗ ಸಾಹಿತಿಗಳು ಬಹಿರಂಗ ಚರ್ಚಗೆ ಬರಬೇಕಾಗಿದೆ.
ನಿರಂತರವಾಗಿ ಹಿಂದುಗಳ ವಿರುದ್ದ ಷಡ್ಯಂತ್ರ ಮಾಡುತ್ತಿರುವ ಸರಕಾರ ಗೋ ಸಂಘಟನೆಯ ಪ್ರಶಾಂತ್ ಪೂಜಾರಿ ಹತ್ಯೆಯಲ್ಲಿ ಸರಕಾರದ ನಡತೆ, ಗೋಮಾಂಸ ಸೇವನೆಯ ಬಗ್ಗೆ ಮುಖ್ಯ ಮಂತ್ರಿಗಳ ಹೇಳಿಕೆ ನಿರಂತರ ಹಿಂದೂ ಮುಖಂಡರ ಮೇಲೆ ಬರುತ್ತಿರುವ ಬೆದರಿಕೆ ಕರೆ, ಕೆ.ಎಫ್.ಡಿ ನಿಷೇದ ಹಿಂಪಡೆದುಕೊಳ್ಳುವಲ್ಲಿನ ಸರಕಾರದ ನಡತೆಯನ್ನು ಅವಲೋಕಿಸಿದಾಗ ಈ ಸರಕಾರ ಹಿಂದೂಗಳ ಪಾಲಿಗೆ ಸತ್ತು ಹೋಗಿದೆ ಎಂದು ವಿ ಸುನೀಲ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

See also  ನೆಲ್ಲಿಕಾರು: ವ್ಯಕ್ತಿಯ ಮೃತದೇಹ ಪತ್ತೆ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು