ಕಾರ್ಕಳ: ಬಿ.ಸಿ.ರೋಡ್ ನಲ್ಲಿ ಗುರುವಾರ ನಡೆದಿದ್ದ ಘಟನಾವಳಿಯನ್ನು ಖಂಡಿಸಿ ಸಂಘ ಪರಿವಾರ ಕರೆದಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂದ್ ಬಿಸಿ ಕಾರ್ಕಳಕ್ಕೂ ತಟ್ಟಿದೆ.
ಮಂಗಳೂರು ಹಾಗೂ ಬೆಳ್ತಂಗಡಿ ಕಡೆಗೆ ಹೋಗುವಂತಹ ಬಸ್ ಗಳು ನಿಲುಗಡೆಗೊಂಡಿರುವುದು ಹಾಗೂ ಮೂಡಬಿದ್ರಿ ಮಾರ್ಗವಾಗಿ ಧರ್ಮಸ್ಥಳಕ್ಕೆ ಹೋಗುವ ಸರಕಾರಿ ಬಸ್ ಗಳ ಸಂಚಾರ ಸಂಪೂರ್ಣ ಮೊಟಕುಗೊಂಡಿರುವುದರಿಂದ ಕಾರ್ಕಳ ನಗರದಿಂದ ಹೋಗುವಂತಹ ಹಾಗೂ ಬರುವಂತಹ ಪ್ರಯಾಣಿಕರ ಸಂಖ್ಯೆ ಕ್ಷೀಣಿಸಿಕೊಂಡಿತ್ತು.
ಬೆಳಿಗ್ಗೆ 9.30 ಕಳೆಯುತ್ತಿದ್ದಂತೆ ಇತರ ಕಡೆಗಳಿಗೆ ತೆರಳುವಂತಹ ಖಾಸಗಿ ಬಸ್ ಓಡಾಟ ಸ್ಥಗಿತಗೊಳಿಸಿರುವುದರಿಂದ ಬೆರಳೆಣಿಕೆಯ ಸಂಖ್ಯೆಯಲ್ಲಿ ಶಾಸಗಿ ಬಸ್ಗಳು ಸಂಚಾರ ಮುಂದುವರಿಸಿದೆ.
ಕೆಲವು ಅಂಗಡಿ ಮುಗ್ಗಟ್ಟು ಬಂದ್ ಆಗಿತ್ತು.
ನಗರದ ಆಯಾಕಟ್ಟು ಜಾಗಗಳಲ್ಲಿ ಪೊಲೀಸ್ ನಿಯೋಜಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸಿದ ವರದಿಯಾಗಿಲ್ಲ. ಎಎಸ್ಪಿ ಡಾ. ಸುಮನಾ ಭಧ್ರತೆಯ ಜವಾಬ್ದಾರಿ ವಹಿಸಿಕೊಂಡಿದ್ದರು.