ಕಾಸರಗೋಡು: ಭಾರೀ ಮೌಲ್ಯದ ಗಾಂಜಾವನ್ನು ವಶಪಡಿಸಿಕೊಂಡಿರುವ ಆದೂರು ಠಾಣಾ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತರನ್ನು ತಲಶ್ಯೆರಿಯ ಶಮೀರ್ ( 32) ಮತ್ತು ಫಿರೋಜ್ ( 48) ಎಂದು ಗುರುತಿಸಲಾಗಿದೆ. ಬೋವಿಕ್ಕಾನ ಬಸ್ಸು ನಿಲ್ದಾಣ ಬಳಿ ಸಂಶಯಾಸ್ಪದವಾಗಿ ಕಂಡು ಬಂದ ಇವರನ್ನು ಪೊಲೀಸರು ವಶಕ್ಕೆ ತೆಗೆದು ವಿಚಾರಣೆ ನಡೆಸಿದಾಗ ಗಾಂಜಾ ತಂಡದವರು ಎಂದು ತಿಳಿದು ಬಂತು. ವಿದ್ಯಾರ್ಥಿಗಳನ್ನು ಕೇಂದ್ರೀಕರಿಸಿ ಇವರು ಗಾಂಜಾ ಮಾರಾಟ ನಡೆಸುತ್ತಿದ್ದರು ಎನ್ನಲಾಗಿದೆ.