News Kannada
Wednesday, July 06 2022

ಕರಾವಳಿ

ಅಕ್ರಮ ಗಣಿಗಾರಿಕೆಗೆ ದಾಳಿ: ಲಕ್ಷಾಂತರ ಬೆಲೆ ಬಾಳುವ ಸೊತ್ತು ವಶಕ್ಕೆ - 1 min read

Photo Credit :

 ಅಕ್ರಮ ಗಣಿಗಾರಿಕೆಗೆ ದಾಳಿ: ಲಕ್ಷಾಂತರ ಬೆಲೆ ಬಾಳುವ ಸೊತ್ತು ವಶಕ್ಕೆ

ಕಾರ್ಕಳ: ಕುಕ್ಕುಂದೂರು ಅಯ್ಯಪ್ಪ ನಗರದ ಡೀಮ್ಡ್ ಫಾರೆಸ್ಟ್ ನಲ್ಲಿ ಕಳೆದ ಕೆಲ ವರ್ಷಗಳಿಂದ ನಿರಂತರವಾಗಿ ಕಾರ್ಯವೆಸಗುತ್ತಿದ್ದ ಅಲಂಕೃತ ಸಿದ್ಧ ಶಿಲಾಕಲ್ಲಿನ ಅಕ್ರಮ ಗಣಿಗಾರಿಕೆಗೆ ಗಣಿಮತ್ತು ಭೂವಿಜ್ಞಾನ, ಕಂದಾಯ, ಅರಣ್ಯ ಇಲಾಖೆ ಜಂಟೀ ಕಾರ್ಯಚರಣೆ ನಡೆಸಿ ಲಾರಿ, ಕ್ರೇನ್ ಸಹಿತ ಲಕ್ಷಾಂತರ ಮೌಲ್ಯ ಸೊತ್ತುಗಳನ್ನು ಮುಟ್ಟುಗೋಲು ಹಾಕಿದ ಘಟನೆ ನಡೆದಿದೆ.

ಬುಧವಾರ ಸುಮಾರು 9ರ ವೇಳೆಗೆ ಕಾರ್ಯಚರಣೆ ಆರಂಭಿಸಿಸಲಾಗಿದೆ. ಸರ್ವೇ ನಂಬ್ರ 281/1ರಲ್ಲಿರುವ 2 ಎಕರೆ ಪ್ರದೇಶದಲ್ಲಿ ನಡೆಯುತ್ತಿದ್ದ  ಅಕ್ರಮ ಗಣಿಗಾರಿಕೆಗೆ ದಾಳಿ ಮಾಹಿತಿ ಹೊರಬೀಳುತ್ತಿದ್ದಂತೆ ಘಟನಾನುಘಟಿಗಳು ಸ್ಥಳದಲ್ಲಿ ಬೀಡುಬಿಟ್ಟಿದ್ದು ಯಾವುದೇ ಕಾರಣ್ಕಕೂ ಮಾಹಿತಿ ಹೊರ ಬೀಳದಂತೆ ದಂಬಾಲು ಬೀಳುತ್ತಿದ್ದ ದೃಶ್ಯಾವಳಿ ಕಂಡು ಬರುತ್ತಿತ್ತು. ಗಿರೀಶ್ ಕುಡ್ವ ಎಂಬವರು ಕಳೆದ ಕೆಲವು ವರ್ಷಗಳ ಹಿಂದೆ ಗಣಿಗಾರಿಕೆ ನಡೆಸುತ್ತಿದ್ದರು. ಗಣಿಗಾರಿಕೆಯ ಪರವಾನಿಗೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ್ದು ಡೀಮ್ಡ್ ಫಾರೆಸ್ಟ್ ಎಂಬ ಕಾರಣಕ್ಕಾಗಿ ಪರವಾನಿಗೆ ರದ್ದುಪಡಿಸಲಾಗಿತ್ತೆಂಬ ಮಾಹಿತಿ ತಿಳಿದುಬಂದಿದೆ. ಈ ಎಲ್ಲಾ ಕಾರಣದಿಂದಾಗಿ ಅದೇ ಜಾಗದಲ್ಲಿ ಯಥಾರೀತಿಯಲ್ಲಿ ಅಲಂಕೃತ ಸಿದ್ಧ ಶಿಲಾಕಲ್ಲಿನ ಅಕ್ರಮ ಗಣಿಗಾರಿಕೆಗೆ ನಡೆಯುತ್ತಾ ಬಂದಿದೆ.

ಅಯ್ಯಪ್ಪನಗರದಲ್ಲಿ ಕಾರ್ಯಚರಿಸುತ್ತಿರುವ ಕರಿಕಲ್ಲಿನ ಗಣಿಗಾರಿಕೆ ಅತೀ ಸೂಕ್ಷ್ಮವಾದ ಗಣಿಗಾರಿಕೆಯಾಗಿದೆ. ತಾಲೂಕಿನಲ್ಲಿ ಇರುವಂತಹ ಗಣಿಗಾರಿಕೆಗಳಲ್ಲಿ ಇದು ಭಾರೀ ಬೆಲೆಬಾಳುವಂತಹವುದಾಗಿದೆ. ಇದಕ್ಕೆ ಕಾರಣವಾಗಿರುವುದು ಅಲಂಕೃತ ಸಿದ್ಧ ಶಿಲಾಕಲ್ಲುಗಳು. ಇವುಗಳನ್ನು ದೇವಾಲಯಗಳ ನಿರ್ಮಾಣಕ್ಕೆ ಹಾಗೂ ಐಷಾರಾಮಿ ಗೃಹ ನಿರ್ಮಾಣಕ್ಕೆ, ಐಷಾರಾಮಿ ಲಾಡ್ಜಿಂಗ್ ಗಳ ನಿರ್ಮಾಣಕ್ಕೆ ಉಪಯೋಗಿಸುತ್ತಾರೆ. ಹೆಸರಾಂತ ಧಾರ್ಮಿಕ ಸ್ಥಳಗಳಲ್ಲಿ ಹಾಗೂ ಗೃಹ, ಲಾಡ್ಜಿಂಗ್ ಗಳಲ್ಲಿ ಇಲ್ಲಿನದೇ ಶಿಲೆಗಳನ್ನು ಕಾಣಬಹುದಾಗಿದೆ. ಕಾರ್ಕಳ, ಬೆಳ್ತಂಗಡಿ, ಉಡುಪಿ, ಮಂಗಳೂರು ಸಹಿತ ನೆರೆ ಜಿಲ್ಲೆಗಳಿಗೂ ಇದನ್ನು ಸಾಗಿಸುತ್ತಿದ್ದಾರೆ. ಅಲಂಕೃತ ಶಿಲಾ ಆಧಾರ ಸ್ತಂಭ ಹಾಗೂ ಮೇಲ್ಚಾವಣಿಗೆ ಇದನ್ನು ಬಳಸುತ್ತಾರೆ. ಅಂದ ಹಾಗೇ ಶಿಲ್ಪರಚನೆಗೆ ಯೋಗ್ಯವಾಗಿದೆ.

ಮತ್ತೊಂದು ಗಮನಾರ್ಹವೆಂದರೆ ಇತರ ಕರಿಕಲ್ಲಿನ ಗಣಿಗಾರಿಕೆಗೆ ವಿಧಿಸುವ ರಾಜಧನಗಿಂತ ಅಯ್ಯಪ್ಪನಗರದಲ್ಲಿ ಕಾರ್ಯಚರಿಸುತ್ತಿರುವ ಅಕ್ರಮ ಗಣಿಗಾರಿಕೆಗೆ ವಿಧಿಸುವ ರಾಜಧನ ಪಾಲು ಶೇ.100 ಅಧಿಕವಾಗಿದೆ. ವಿಪರ್ಯಾಸವೆಂದರೆ ಡೀಮ್ಡ್ ಫಾರೆಸ್ಟ್ ಕಾರಣಕ್ಕಾಗಿ ಗಣಿಗಾರಿಕೆಗೆ ಪರವಾನಿಗೆ ನೀಡದೆ ಇರುವುದರಿಂದ ಅಕ್ರಮವಾಗಿ ಗಣಿಗಾರಿಕೆ ತಲೆ ಎತ್ತಿದೆ. ಒಂದೆಡೆಯಲ್ಲಿ ಸರಕಾರಕ್ಕೆ ರಾಜಧನವಿಲ್ಲದೇ ಪ್ರಾಕೃತಿಕ ಸಂಪತ್ತು ಲೂಟಿಯಾಗುತ್ತಿರುವುದು ಕಂಡುಬರುತ್ತಿದೆ.  ಗಣಿಮತ್ತು ಭೂ ವಿಜ್ಞಾನ ಇಲಾಖಾಧಿಕಾರಿ ಕೊದಂಡರಾಮಯ್ಯ, ತಹಶೀಲ್ದಾರ್ ರಾಘವೇಂದ್ರ,ಅರಣ್ಯ ಇಲಾಖಾಧಿಕಾರಿರಾಜಶೇಖರ್, ಆನಂದ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು. ಪೊಲೀಸ್ ಭದ್ರತೆ ಏರ್ಪಡಿಸಲಾಗಿತ್ತು.

See also  ರನ್ ವೇಯಿಂದ ಜಾರಿದ ವಿಮಾನ: ಮಂಗಳೂರಿನಲ್ಲಿ ತಪ್ಪಿದ ಭಾರೀ ದೊಡ್ಡ ದುರಂತ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು