ಮೂಡುಬಿದಿರೆ: ಈಜಲೆಂದು ಸ್ನೇಹಿತರೊಂದಿಗೆ ತೆರಳಿದ್ದ ಮೂಡುಬಿದಿರೆ ಕಾಲೇಜೊಂದರ ವಿದ್ಯಾರ್ಥಿ ಬೆಳುವಾಯಿಯ ಮಠದಕೆರೆಯಲ್ಲಿ ಭಾನುವಾರ ಸಂಜೆ ಮುಳುಗಿ ಮೃತಪಟ್ಟಿದ್ದಾನೆ.
ಮೂಡುಬಿದಿರೆ ಕೋಟೆಬಾಗಿಲು ಮುರಮೇಲು ನಿವಾಸಿ ಸ್ಥಳೀಯ ಬಿಜೆಪಿ ಮುಖಂಡ ಮಂಜುನಾಥರೈ ಅವರ ಪುತ್ರ, ಮಹಾವೀರ ಕಾಲೇಜಿನ ಪ್ರಥಮ ಬಿ.ಕಾಂ.ವಿದ್ಯಾರ್ಥಿ ಆಕಾಶ್ ರೈ (17) ಮೃತಪಟ್ಟ ವಿದ್ಯಾರ್ಥಿ. ಆಕಾಶ್ ರೈ ತನ್ನ ಸ್ನೇಹಿತರೊಂದಿಗೆ ಈಜಲೆಂದು ಮಠದಕೆರೆಗೆ ತೆರಳಿದ್ದರು. ಈಜುವ ವೇಳೆ ಆಕಾಶ್ ರೈ ಮುಳುಗಿದ್ದು ಇತರರು ರಕ್ಷಿಸಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲವೆನ್ನಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಬಿಜೆಪಿಯ ನೂರಾರು ಕಾರ್ಯಕರ್ತರು ಮೃತದೇಹವಿರಿಸಿದ್ದ ಮೂಡುಬಿದರೆ ಸರ್ಕಾರಿ ಆಸ್ಪತ್ರೆಯ ಎದುರು ಜಮಾಯಿಸಿದ್ದರು. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.