ಮಂಗಳೂರು: ಮಾಧ್ಯಮ ಜನರ ದೃಷ್ಟಿಕೋನವನ್ನು ಬದಲಾಯಿಸುವುದು ಮಾತ್ರವಲ್ಲದೇ ದೃಷ್ಟಿಕೋನವನ್ನು ಸೃಷ್ಠಿಸುತ್ತವೆ ಎಂದು ಭಾರತೀಯ ಪ್ರೆಸ್ ಕ್ಲಬ್ ನ ಅಧ್ಯಕ್ಷ ರಾಹುಲ್ ಜಲಾಲಿ ಹೇಳಿದರು.
ಮೂರು ದಶಕಗಳ ಸುಧೀರ್ಘ ಅನುಭವ ಹೊಂದಿರುವ ಜಲಾಲಿ ದೇಶದ ಅಗ್ರಶ್ರೇಣಿಯಲ್ಲಿರುವ ಪತ್ರಿಕೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸಿರುವ ಅವರು, ಇಲ್ಲಿನ ದೀಪ ಕಂಫರ್ಟ್ಸ್ ನಲ್ಲಿ ಸ್ಪೀಯರ್ ಹೆಡ್ ಮೀಡಿಯಾ ಪ್ರೈ.ಲಿ ಅಂತರ್ಜಾಲ ಪತ್ರಿಕೆ ನ್ಯೂಸ್ ಕರ್ನಾಟಕ ಹಾಗೂ ಮಾಸಿಕ ಪತ್ರಿಕೆ ಕರ್ನಾಟಕ ಟುಡೇ ಸೋಮವಾರ ಆಯೋಜಿಸಿದ್ದ ವಾರ್ಷಿಕ ಕೂಟದಲ್ಲಿ ಭಾಗವಹಿಸಿ ಮಾಧ್ಯಮ ಜನರ ದೃಷ್ಠಿಕೋನವನ್ನು ಬದಲಾಯಿಸುತ್ತದೆಯಾ? ಎಂಬ ವಿಷಯದ ಕುರಿತು ಮಾತನಾಡಿದರು.
ಪ್ರಸ್ತುತ ಮಾಧ್ಯಮಗಳು ಅನುಸರಿಸುತ್ತಿರುವ ಪ್ರವೃತ್ತಿಗಳನ್ನು ಖಂಡಿಸಿದ ಅವರು ಟಿಆರ್ ಪಿ ಗೋಸ್ಕರ ನೈಜತೆಯ ಜತೆಗೆ ರಾಜಿ ಸಂಧಾನ ಮಾಡುತ್ತಿವೆ ಎಂದು ಆಪಾದಿಸಿದರು. ಮೂರು ದಶಕಗಳ ಹಿಂದೆ ಒಂದು ಪತ್ರಿಕೆಯು ಅದರ ಸಂಪಾದಕರ ಹೆಸರಿನಿಂದ ಗುರುತಿಸಲ್ಪಡುತ್ತಿತ್ತು. ಆದರೆ ಇಂದು ಬಂಡವಾಳಶಾಹಿಗಳ ಒಡೆತನದಿಂದ ಜನಪ್ರಸ್ತುತವಾಗಿದೆ ಎಂದು ಅವರು ವಿಷಾದಿಸಿದರು.
ಹುದುಸಲ್ಪಟ್ಟ ಪತ್ರಿಕೋದ್ಯಮವು ಯಾವ ರೀತಿ ಜನನ ಪಡೆಯಿತು ಎಂಬುದನ್ನು ವಿವರಿಸುತ್ತಾ ಜಲಾಲಿ,ಮೊದಲ ಹಾಗು ಎರಡನೇ ಇರಾಕ್ ಯುದ್ದದ ದೃಷ್ಠಾಂತಗಳನ್ನು ನೀಡಿದರು. ದೇಶದ ದೊಡ್ಡಣ್ಣ ಎಂದೇ ಖ್ಯಾತಿ ಪಡೆದಿರುವ ಅಮೇರಿಕವು ತನಗೆ ಬೇಕಾದಂತೆ ಮಾಧ್ಯಮವನ್ನು ಬಳಸಿಕೊಂಡ ಪರಿಯನ್ನೂ ವಿವರಿಸಿದರು. ಕಳೆದ ಕೆಲವು ದಶಕಗಳಲ್ಲಿ ಮಾಧ್ಯಮದ ವಿವಿಧ ಬೆಳವಣಿಗೆಯ ಹಂತಗಳನ್ನು ಎಳೆ ಎಳೆಯಾಗಿ ವಿವರಿಸಿದರು. ಸಂವಾದದ ಕೊನೆಯ ಹಂತದಲ್ಲಿ ನೆರೆದಿರುವ ಕುತೂಹಲಭರಿತ ಪ್ರೇಕ್ಷಕರು ರಾಹುಲ್ ಜಲಾಲಿಯವರ ಮುಂದಿಟ್ಟ ಪ್ರಶ್ನೆಗಳಿಗೆ ಸೂಕ್ತ ಪ್ರತ್ಯುತ್ತರವನ್ನು ನೀಡಿದರು.
ಮಾಸಿಕ ಪತ್ರಿಕೆ ಕರ್ನಾಟಕ ಟುಡೇ ಸಂಪಾದಕ ರಾಮ್ ಬಾಬು ಉಪಸ್ಥಿತರಿದ್ದರು. ಸ್ಪೀಯರ್ ಹೆಡ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಸಿಒಒ ಬ್ರಾಯನ್ ಫೆರ್ನಾಂಡೀಸ್ ವಂದಿಸಿದರು. ದಿಶಾ ಪ್ರಭು ನಿರೂಪಿಸಿದರು.