News Kannada
Friday, July 01 2022

ಕರಾವಳಿ

ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಳವು: ಕಳ್ಳಿಯ ಬಂಧನ - 1 min read

Photo Credit :

ಮಹಿಳೆಯ ಕುತ್ತಿಗೆಯಲ್ಲಿದ್ದ ಚಿನ್ನಾಭರಣ ಕಳವು: ಕಳ್ಳಿಯ ಬಂಧನ

ಕಾಸರಗೋಡು: ದೇವಾಸ್ಥಾನದ ಉತ್ಸವಕ್ಕೆ ತಲುಪಿದ್ದ ಮಹಿಳೆ ಮತ್ತು ಮಗುವಿನ ಚಿನ್ನಾಭರಣ ಕಳವುಗೈದ ಘಟನೆ ಸೋಮವಾರ ರಾತ್ರಿ ಕಾನತ್ತೂರಿನಲ್ಲಿ ನಡೆದಿದ್ದು, ತಮಿಳು ಅಲೆಮಾರಿ ಯುವತಿಯನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.

ಬಂಧಿತ ಯುವತಿಯನ್ನು ತಮಿಳುನಾಡು ಮಧುರೆಯ ನಂದಿನಿ ( 26) ಎಂದು ಗುರುತಿಸಲಾಗಿದೆ. ಇನ್ನೋರ್ವ ಯುವತಿ ಪರಾರಿಯಾಗಿದ್ದಾಳೆ. ಕಾನತ್ತೂರು ದೇವಾಸ್ಥಾನದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಾರದಾರವರ ಕುತ್ತಿಗೆಯಲ್ಲಿದ್ದ ಎಂಟು ಪವನ್ ಚಿನ್ನಾಭರಣ ಮತ್ತು ಮೊಮ್ಮಗಳ ಮುಕ್ಕಾಲು ಪವನ್ ಪಾದಸರ ಚಿನ್ನಾಭರಣವನ್ನು ಎಗರಿಸಲಾಗಿತ್ತು. ಕೂಡಲೇ ಶಾರಾದಾ ಬೊಬ್ಬೆ ಹಾಕಿದಾಗ  ಅಲ್ಲಿದ್ದವರು ಒಬ್ಬಾಕೆಯನ್ನು ಹಿಡಿಯಲು ಯಶಸ್ವಿಯಾದರೂ  ಇನ್ನೊಬ್ಬಳು ಪರಾರಿಯಾದಳು.  ಬಳಿಕ ಆದೂರು ಪೊಲೀಸರಿಗೆ ಮಾಹಿತಿ ನೀಡಲಾಯಿತು.

ಸ್ಥಳಕ್ಕೆ ಆಗಮಿಸಿದ ಪೊಲೀಸರು  ಆರೋಪಿ ನಂದಿನಿಯನ್ನು ಬಂಧಿಸಿದರು. ಆದರೆ ಕಳವುಗೈದ ಚಿನ್ನಾಭರಣ ಪತ್ತೆಯಾಗಲಿಲ್ಲ.  ಕದ್ದ ಚಿನ್ನಾಭರಣವನ್ನು ಇನ್ನೊಬ್ಬಳು ತೆಗೆದು ಪರಾರಿಯಾಗಿರಬಹುದು ಎಂದು ಶಂಕಿಸಲಾಗಿದೆ.

See also  ಪಡಿತರ ಚೀಟಿ, ಆಧಾರ್ ಲಿಂಕ್ ಸಮಸ್ಯೆ: ಜನರ ಆಕ್ರೋಶ
ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published.

Subscribe to our Brand New YouTube Channel

Subscribe Newsletter

Get latest news karnataka updates on your email.

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು